ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಸಂಪರ್ಕಿತರ ಪತ್ತೆ ಕೈಬಿಟ್ಟ ಸರ್ಕಾರ

ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು * ಕುಟುಂಬದ ಸದಸ್ಯರು ಮಾತ್ರ ಕ್ವಾರಂಟೈನ್
Last Updated 20 ಜೂನ್ 2020, 20:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪೀಡಿತರು ಹಾಗೂ ಕೊರೊನಾ ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಮಯದಲ್ಲಿ ರೋಗಿಗಳ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಆರೋಗ್ಯ ಇಲಾಖೆ ಸೋಂಕಿತರ ಕುಟುಂಬದ ಸದಸ್ಯರನ್ನು ಮಾತ್ರ ಪ್ರಸ್ತುತ ಕ್ವಾರಂಟೈನ್‌ ಮಾಡುತ್ತಿದೆ.

ರಾಜ್ಯದಲ್ಲಿ ಪ್ರಥಮ ಕೋವಿಡ್ ಪ್ರಕರಣ ವರದಿಯಾದ ತಕ್ಷಣ ಆ ಹಿಂದಿನ 14 ದಿನಗಳಲ್ಲಿ ರೋಗಿಯ ಪ್ರಯಾಣದ ಇತಿಹಾಸ ಹಾಗೂ ಈ ಅವಧಿಯಲ್ಲಿ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಗುರುತಿಸಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಇದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಮತ್ತು ಕ್ವಾರಂಟೈನ್‌ ಅವಧಿಯಲ್ಲಿ ಲಕ್ಷಣ ಕಾಣಿಸಿದರೆ ಚಿಕಿತ್ಸೆ ನೀಡುವುದೂ ಸುಲಭವಾಗಿತ್ತು.

ಆದರೆ, ಪ್ರಕರಣಗಳ ಏರಿಕೆಯ ಹಿಂದೆಯೇ ಆರೋಗ್ಯ ಇಲಾಖೆ, ಈಗ ಸಂಪರ್ಕಿತರ ಪತ್ತೆ ಕಾರ್ಯ ದಿಂದಲೂ ಹಿಂದೆ ಸರಿದಿದೆ. ಸಿಬ್ಬಂದಿ ಕೊರತೆ, ಕ್ವಾರಂಟೈನ್‌ ಕೇಂದ್ರದಲ್ಲಿ ಸ್ಥಳಾವಕಾಶದ ಅಭಾವವೇ ಇದಕ್ಕೆ ಪ್ರಮುಖ ಕಾರಣವಾಗಿದೆ.ರೋಗಿಗಳ ಜೊತೆಗೆ ಸಂಪರ್ಕಕ್ಕೆ ಬಂದಿದ್ದವರು ಸ್ವಯಂಪ್ರೇರಣೆಯಿಂದ ವರದಿ ಮಾಡಿ ಕೊಳ್ಳಲು ಹಿಂದೇಟು ಹಾಕು ತ್ತಿದ್ದಾರೆ. ಇದರಿಂದಾಗಿ ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತಿವೆ.

ಇನ್ನೊಂದೆಡೆ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಗೋಚರಿಸದ್ದರಿಂದಾಗಿ ಸೋಂಕು ಶಂಕಿತರ ಪತ್ತೆ ಕಾರ್ಯ ಅಧಿಕಾರಿಗಳಿಗೆ ಸವಾ ಲಾಗಿದೆ. ರಾಜ್ಯದಲ್ಲಿ ವರದಿ ಯಾದ ಒಟ್ಟು ಪ್ರಕರಣಗಳಲ್ಲಿ ಶೇ 19.6 ರಷ್ಟು ಪ್ರಕರಣಗಳು ರೋಗಿಗಳ ಸಂಪರ್ಕದಿಂದ ವರದಿಯಾಗಿದೆ.

ಸರಾಸರಿ​5.4 ಮಂದಿಗೆ ಸೋಂಕು

ರಾಜ್ಯದ ವಿವಿಧೆಡೆ ನಡೆಸಿದ ರ್‍ಯಾಂಡಮ್ ಪರೀಕ್ಷೆಯಲ್ಲಿ ರೋಗಿ ಜೊತೆ ಪರೋಕ್ಷ ಸಂ‍ಪರ್ಕ ಹೊಂದಿದವರೂ ಸೋಂಕಿತರಾಗಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಪ್ರತಿ ವ್ಯಕ್ತಿಯಿಂದ ಸರಾಸರಿ 5.4 ಮಂದಿಗೆಸೋಂಕು ಹರಡಿದೆ. ಈವರೆಗೆ ಹೀಗೆ 1,551 ಮಂದಿ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದಾರೆ. ಸಂಪರ್ಕ ಹೊಂದಿದವರ ಪತ್ತೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸದ ಪರಿಣಾಮ ಸೋಂಕು ತಗುಲಿದ ಕೆಲದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ
ನಿರ್ಮಾಣವಾಗಿದೆ.

‘ಪರೋಕ್ಷ ಸಂಪರ್ಕ ಹೊಂದಿದವರ ಪತ್ತೆ ಕಷ್ಟ. ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲ. ದಿನದ ಬಹುತೇಕ ಸಮಯ ಸಭೆಗಳಿಗೇ ಹೋಗುತ್ತಿದ್ದು, ಅಧಿಕಾರಿಗಳಿಗೆ ಕಾರ್ಯಕ್ಷೇತ್ರಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ. ಜನರೇ ಎಚ್ಚೆತ್ತುಕೊಂಡು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT