ಶುಕ್ರವಾರ, ಏಪ್ರಿಲ್ 3, 2020
19 °C
ಮೆಕ್ಕಾದಿಂದ ಹಿಂದಿರುಗಿದ ಕುಟುಂಬದ ಇಬ್ಬರಿಗೆ ಚಿಕಿತ್ಸೆ

ಪೊಲೀಸರ ನೆರವಿನಿಂದ ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮೆಕ್ಕಾ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕಿದ್ದರಿಂದ, ಪೊಲೀಸರ ನೆರವಿನಿಂದ ಶುಕ್ರವಾರ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅರಕಲಗೂಡು ತಾಲ್ಲೂಕಿನ ಕುಟುಂಬವೊಂದು ಫೆಬ್ರವರಿಯಲ್ಲಿ ಮೆಕ್ಕಾ- ಮದೀನಾ ಯಾತ್ರೆಗೆ ತೆರಳಿ, ಮಾರ್ಚ್ 5 ರಂದು ಊರಿಗೆ ವಾಪಸ್ಸಾಗಿತ್ತು. ಬಂದ ನಂತರ ಮಹಿಳೆಯೊಬ್ಬರಿಗೆ ಜ್ವರ ಕಾಣಿಸಿಕೊಂಡಿತು. ಕೊರೊನಾ ವೈರಸ್ ಸೋಂಕಿನ ಶಂಕೆಯಿಂದ, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಅವರ ಮನೆಗೆ ಭೇಟಿ ನೀಡಿ ಹಾಸನಕ್ಕೆ ಬಂದು ಚಿಕಿತ್ಸೆ ಪಡೆಯುವಂತೆ ಸೂಚಿಸಿತು.

ಅದರಂತೆ ಮಹಿಳೆ ಚಿಕಿತ್ಸೆ ಪಡೆಯಲು ಬಂದರು. ಆದರೆ, ಅವರ ಪತಿ ಹಿಂದೇಟು ಹಾಕಿದರು. ಎಷ್ಟೆಲ್ಲ ತಿಳಿ ಹೇಳಿದರೂ ಮನವಿ ಮಾಡಿದರೂ ಆಸ್ಪತ್ರೆಗೆ ಬರಲು ಒಪ್ಪಲಿಲ್ಲ. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸ್ವಾಮಿಗೌಡ ಅವರು ಪೋಲಿಸರಿಗೆ ದೂರು ನೀಡಿದರು. ನಂತರ ವ್ಯಕ್ತಿಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು