ಮಂಗಳವಾರ, ಏಪ್ರಿಲ್ 7, 2020
19 °C

ಯಾದಗಿರಿ: ಕೊರೊನಾ ಸೋಂಕು ಭೀತಿ, ರಸ್ತೆ ತೋಡಿದ ಗ್ರಾಮಸ್ಥರು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯರಗೋಳ (ಯಾದಗಿರಿ ಜಿಲ್ಲೆ): ಜಿಲ್ಲೆಯ ಯರಗೋಳ ಗ್ರಾಮದ ಜನತೆಯಲ್ಲಿ ಕೊರೊನಾ ಸೋಂಕಿನ ಆತಂಕ ಹೆಚ್ಚಾಗಿದ್ದು, ಬೇರೆ ಗ್ರಾಮದ ಜನತೆ ಪ್ರವೇಶ ಮಾಡದಂತೆ ತಡೆಯಲು ಗ್ರಾಮದ ಹೊರವಲಯದಲ್ಲಿರುವ ಯಾಗಾಪುರ ರಸ್ತೆಯನ್ನು ತುಂಡರಿಸಿದ್ದಾರೆ.

ದೇಶದಲ್ಲಿ ಪ್ರಥಮವಾಗಿ  ಕೊರೊನಾ ವೈರಸ್ ಸೋಂಕಿಗೆ ಬಲಿಯಾದ ಕಲಬುರ್ಗಿ ಜಿಲ್ಲೆಯ 76 ವರ್ಷದ ವೃದ್ಧ ಸಿದ್ಧಿಕಿ ಮೃತರಾದ ನಂತರ ಕಲಬುರ್ಗಿ ಜಿಲ್ಲೆಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಆತಂಕ ಶುರುವಾಗಿದೆ.

ಯರಗೋಳ ಗ್ರಾಮದಿಂದ 3 ಕಿ. ಮೀಟರ್ ದೂರದಲ್ಲಿ ಕಲಬುರ್ಗಿ ಜಿಲ್ಲೆಯ ನಾಲವಾರ ರೈಲು ನಿಲ್ದಾಣಕ್ಕೆ ವಾರದ ಹಿಂದೆ ನೂರಾರು ಸಂಖ್ಯೆಯ ಜನರು ಬೆಂಗಳೂರು ಮತ್ತು ಮುಂಬಯಿ ನಗರದಿಂದ ಆಗಮಿಸಿದ್ದಾರೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ತಾಂಡ ನಿವಾಸಿಗಳು ಮತ್ತು ಗ್ರಾಮಸ್ಥರು ಮುಂಬಯಿಯ ಮೀನು ಉದ್ಯಮ ಮತ್ತು ಬೆಂಗಳೂರಿನ ಕಟ್ಟಡ ಕಟ್ಟುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಲಾಡ್ಲಾಪುರ ಜಾತ್ರೆ ಮತ್ತು ಯುಗಾದಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಸಾವಿರಾರು ಸಂಖ್ಯೆಯ ಜನರು ಆಗಮಿಸಿದ್ದರು.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು,
ನಮ್ಮ ಗ್ರಾಮದ ಜನತೆಗೆ ಕೊರೊನಾ ಸೋಂಕು ತಗಲದಂತೆ ಮುನ್ನೆಚ್ಚರಿಕೆಯಾಗಿ  ರಸ್ತೆಯನ್ನು ತುಂಡರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು