ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update | ರಾಜ್ಯದಲ್ಲಿಂದು 416 ಹೊಸ ಪ್ರಕರಣ, 9 ಸಾವು

ಬೆಂಗಳೂರಿನಲ್ಲಿ ಒಂದೇ ದಿನ 94 ಜನರಿಗೆ ಸೋಂಕು
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ 416 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 9 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,697 ಆಗಿದ್ದು, ಸಾವಿನ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಈವರೆಗೆ 5,391 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 3,170 ಸಕ್ರಿಯ ಪ್ರಕರಣಗಳಿವೆ.

ಇಂದು 181 ಮಂದಿ ಚೇತರಿಕೆಯಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೊಸದಾಗಿ ಕಂಡುಬಂದ ಪ್ರಕರಣಗಳ ಪೈಕಿ 22 ಮಂದಿ ಬೇರೆ ದೇಶದಿಂದ ಬಂದವರಾದರೆ, 116 ಮಂದಿ ಅನ್ಯ ರಾಜ್ಯಗಳಿಂದ ಬಂದವರು.

ಬೆಂಗಳೂರಿನಲ್ಲಿ 94 ಜನರಿಗೆ ಸೋಂಕು: ಬೆಂಗಳೂರು ನಗರದಲ್ಲಿ ಅತಿಹೆಚ್ಚು, 55 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಬೀದರ್ 73, ಬಳ್ಳಾರಿ, ರಾಮನಗರಗಳಲ್ಲಿ ತಲಾ 38, ಕಲಬುರ್ಗಿ 34, ಮೈಸೂರು 22, ಹಾಸನ 16, ರಾಯಚೂರು 15, ಉಡುಪಿ 13, ಹಾವೇರಿ 12, ವಿಜಯಪುರ 9, ಚಿಕ್ಕಮಗಳೂರು 8, ಧಾರವಾಡ, ಚಿಕ್ಕಬಳ್ಳಾಪುರ ತಲಾ 5, ದಕ್ಷಿಣಕನ್ನಡ, ಮಂಡ್ಯ, ಉತ್ತರಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರಗಳಲ್ಲಿ ತಲಾ 4, ದಾವಣಗೆರೆ 3, ಬಾಗಲಕೋಟೆ, ಶಿವಮೊಗ್ಗ, ಗದಗ, ತುಮಕೂರಿನಲ್ಲಿ ತಲಾ 2, ಬೆಳಗಾವಿ, ಚಾಮರಾಜನಗರ ತಲಾ 1 ಹಾಗೂ ಇತರೆ 1 ಪ್ರಕರಣ ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT