ಭಾನುವಾರ, ಮಾರ್ಚ್ 7, 2021
29 °C

ಲಾಕ್‌ಡೌನ್‌ | ಕನ್ನಡಿಗರ ಕ್ವಾರಂಟೈನ್‌ಗೆ ಬೆಂಗಳೂರು, ಮಂಗಳೂರು ಹೊಟೇಲ್‌ಗಳು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ದೇಶಗಳಲ್ಲಿ ಕೋವಿಡ್‌–19ನಿಂದಾಗಿ ಸಿಕ್ಕಿ ಹಾಕಿಕೊಂಡಿರುವ ಪ್ರವಾಸಿಗರು, ವಿದ್ಯಾರ್ಥಿಗಳು, ಹಡಗು ಸಿಬ್ಬಂದಿ ಸೇರಿದಂತೆ ಕರ್ನಾಟಕದ 10,823 ಮಂದಿ ಮೇ 8ರಂದು ರಾಜ್ಯಕ್ಕೆ ಮರಳಲಿದ್ದಾರೆ.

ಪ್ರಯಾಣಿಕರು ಬೆಂಗಳೂರು ಅಥವಾ ಮಂಗಳೂರು ನಿಲ್ದಾಣಕ್ಕೆ ಬಂದಿಳಿಯುವ ನಿರೀಕ್ಷೆ ಇದೆ. 

ರಾಜ್ಯಕ್ಕೆ ಮರಳಿದವರು ತಮ್ಮ ಹೊಟೇಲ್‌ ಹಣವನ್ನು ಅವರೇ ಪಾವತಿಸಲಿದ್ದಾರೆ ಎಂದು ಆರೋಗ್ಯ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರು ಹೊಟೇಲ್‌ ಸಿಬ್ಬಂದಿಯೊಂದಿಗೆ ಚರ್ಚಿಸಿ ದರವನ್ನು ಅಂತಿಮಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 

ವಿದೇಶಗಳಿಂದ ಮರಳಿದವರು ಹೊಸ ಕೊರೊನಾ ಸೋಂಕಿನ ಮೂಲವಾಗಬಹುದೆಂಬ ಆತಂಕ ಹಲವರಲ್ಲಿ ಮೂಡಿತ್ತು. ಆದರೆ, ಸರ್ಕಾರದ ಮುಖ್ಯಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಿದ ಸಚಿವ ಎಸ್.ಸುರೇಶ್‌ ಕುಮಾರ್‌, 20 ಪುಟಗಳ ಕಾರ್ಯಾಚರಣೆ ವಿಧಾನವನ್ನು ಅಂತಿಮಗೊಳಿಸಿರುವುದಾಗಿ ತಿಳಿಸಿದ್ದಾರೆ. 

‘ನಾವು ವಿಮಾನ ನಿಲ್ದಾಣಗಳಲ್ಲಿ ದೊಡ್ಡ ತಪಾಸಣೆ ತಂಡಗಳನ್ನು ಹೊಂದಿದ್ದೇವೆ. ಸೋಂಕಿನ ಲಕ್ಷಣರಹಿತ ಪ್ರಯಾಣಿಕರನ್ನು ಭಾರತ ಸರ್ಕಾರದ (ಜಿಒಐ) ಮಾರ್ಗಸೂಚಿಗಳ ಪ್ರಕಾರ ತಮ್ಮ ಸ್ವಂತ ಖರ್ಚಿನಲ್ಲಿ ಹೊಟೇಲ್‌ಗಳಲ್ಲಿ ನಿರ್ಬಂಧಿಸಲಾಗುತ್ತದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿ ಆಯುಕ್ತರು ಹೋಟೆಲ್‌ಗಳನ್ನು ಅಂತಿಮಗೊಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. 

‘ಆರೋಗ್ಯ ಅಪ್ಲಿಕೇಶನ್‌ಗಳು ಕಡ್ಡಾಯ’
ರಾಜ್ಯಕ್ಕೆ ಹಿಂದಿರುಗಿದವರು ‘ಆರೋಗ್ಯ ಸೇತು’ ಮತ್ತು ಸಂಪರ್ಕ ತಡೆಯನ್ನು ವೀಕ್ಷಿಸುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅವರು ವಿಮಾನ ನಿಲ್ದಾಣದಿಂದ ಹೊರಡುವ ಮೊದಲು ಅವರ ಡೇಟಾ ಸಂಗ್ರಹಿಸಲಾಗುತ್ತದೆ ಎಂದು ಆರೋಗ್ಯ ಆಯುಕ್ತ ಪಂಕಜ್‌ ಕುಮಾರ್‌ ತಿಳಿಸಿದ್ದಾರೆ. 

ಪ್ರಯಾಣಿಕರನ್ನು ಏಳು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಅವರನ್ನು ಎರಡು ಹಂತಗಳಲ್ಲಿ ತಪಾಸಣೆಗೆ ನಡೆಸಲಾಗುತ್ತದೆ. ವರದಿಯಲ್ಲಿ ನೆಗೆಟಿವ್ ಬಂದರೆ ಮನೆಗೆ ಕಳುಹಿಸಿಲಾಗುತ್ತದೆ ಎಂದು ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು