ಮಂಗಳವಾರ, ಮಾರ್ಚ್ 31, 2020
19 °C

ಪಶ್ಚಿಮ ಬಂಗಾಳದಿಂದ ಬಂದು ಮನೆ ಸೇರಿ ಆತಂಕ ಮೂಡಿಸಿದ ವ್ಯಕ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಪಟ್ಟಣದ 3ನೇ ವಾರ್ಡಿನ ವ್ಯಕ್ತಿಯೊಬ್ಬ ಮೂರು ದಿನಗಳ ಹಿಂದೆ ಪಶ್ಚಿಮ ಬಂಗಾಳದಿಂದ ಬಂದು ಮನೆ ಸೇರಿರುವ ವ್ಯಕ್ತಿಯೊಬ್ಬರು ಸುತ್ತಲ ಪ್ರದೇಶದಲ್ಲಿ ಆತಂಕ ಮೂಡಿಸಿದ್ದಾರೆ. 

ವ್ಯಕ್ತಿ ಮನೆಯಿಂದ ಹೊರ ಬರದೆ ಒಳಗಡೆಯೇ ಉಳಿದುಕೊಂಡ್ಡಿದ್ದಾರೆ. ಸೋಮವಾರ ಸಂಜೆ ಅವರು ಮನೆಗೆ ಬಂದಿರುವ ವಿಷಯ ಸುತ್ತಲಿನ ನಿವಾಸಿಗಳಿಗೆ ಗೊತ್ತಾಗಿದೆ. ಮೂರು ದಿನಗಳಿಂದ ಮನೆಯಿಂದ ಹೊರ ಬಂದಿಲ್ಲ ಎಂದರೆ ಅವರಿಗೆ ಕೊರೊನಾ ವೈರಸ್‌ ಸೋಂಕು ಇರಬೇಕು ಎಂಬ ಶಂಕೆ ಸ್ಥಳೀಯ ಜನರಲ್ಲಿ ಆವರಿಸಿದೆ. 

ವ್ಯಕ್ತಿಯ ಮಾಹಿತಿಯನ್ನು ತಹಶೀಲ್ದಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ವಿಷಯ ತಿಳಿದ ಕೊರೊನಾ ವೈರಸ್‌ ಟಾಸ್ಕ ಪೊರ್ಸ್ ಸಮಿತಿಯ ಸದಸ್ಯರು ಶಂಕಿತನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. 

ವ್ಯಕ್ತಿಯಲ್ಲಿ ಕೊರೊನಾ ವೈರಸ್‌ ಸೋಂಕು ಉಂಟಾಗಿರುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ವೈದ್ಯರು ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೆ, ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಿದ್ದಾರೆ. ನಂತರ ಸುತ್ತಲಿನ ಜನರಿಗೆ ತಾವು ಕೂಡ ಯಾರು ಮನೆಯಿಂದ ಹೊರ ಬಂದು ಗುಂಪು ಸೇರದಂತೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು