ಸೋಮವಾರ, ಆಗಸ್ಟ್ 2, 2021
26 °C

ಕೋವಿಡ್‌-19: 13 ಪೊಲೀಸರಿಗೆ ಸೋಂಕು; ಕ್ವಾರಂಟೈನ್‌ನಲ್ಲಿ 420 ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ‘ನಗರದ 13 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ 420ಕ್ಕೂ ಹೆಚ್ಚು ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ಕೊರೊನಾದಿಂದಾಗಿ ಎಎಸ್‌ಐ ಸಾವನ್ನಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎರಡೂವರೆ ತಿಂಗಳು ಯಾವುದೇ ಸೋಂಕು ನಮ್ಮಲ್ಲಿ ಇರಲಿಲ್ಲ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಜನ ದಟ್ಟಣೆ ಜಾಸ್ತಿಯಾಗಿದೆ. ಜನರ ಓಡಾಟವೂ ಹೆಚ್ಚಾಗಿದೆ. ಅಂತರ ರಾಜ್ಯ ನಡುವಿನ ಸಂಚಾರವೂ ಹೆಚ್ಚಾಗಿದೆ’ ಎಂದರು.

'ಲಾಕ್‌ಡೌನ್ ಸಡಿಲಿಕೆ ಬಳಿಕ ಆರೋಪಿಗಳ ಬಂಧನ, ನಿಯಂತ್ರಿತ ಪ್ರದೇಶದಲ್ಲಿ (ಕಂಟೈನ್‌ಮೆಂಟ್) ಭದ್ರತೆ ಕೆಲಸ ಮಾಡುವಾಗ, ಗಸ್ತು ತಿರುಗುವಾಗ ಪೊಲೀಸರಿಗೆ ಸೋಂಕು ತಗಲುತ್ತಿದೆ’ ಎಂದರು.

‘ಸಾವನ್ನಪ್ಪಿರುವ ಎಎಸ್‌ಐ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಅವರಿಗೆ ರಜೆ ಕೂಡ ನೀಡಲಾಗಿತ್ತು. ಕರ್ತವ್ಯದಲ್ಲಿದ್ದಾಗ ಅವರಿಗೆ ಸೋಂಕು ತಗುಲಿಲ್ಲ. ಹೊರಗಡೆ ಇದ್ದಾಗ ಸೋಂಕು ತಗುಲಿದೆ’ ಎಂದರು.

‘ಪ್ರತಿಯೊಬ್ಬ ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಾಸ್ಕ್, ಸ್ಯಾನಿಟೈಸ್‌ರ್‌, ಗ್ಲೌಸ್ ಬಳಕೆ ಮಾಡಬೇಕು. ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕು’ ಎಂದೂ ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು