‘ಈ ಬೆಳವಣಿಗೆಗೂ ಬಿಜೆಪಿಗೂ ಸಂಬಂಧವಿಲ್ಲವಂತೆ, ನೀವು ನಂಬ್ತೀರಾ’ ಡಿಕೆಶಿ ಪ್ರಶ್ನೆ

ಶನಿವಾರ, ಜೂಲೈ 20, 2019
28 °C

‘ಈ ಬೆಳವಣಿಗೆಗೂ ಬಿಜೆಪಿಗೂ ಸಂಬಂಧವಿಲ್ಲವಂತೆ, ನೀವು ನಂಬ್ತೀರಾ’ ಡಿಕೆಶಿ ಪ್ರಶ್ನೆ

Published:
Updated:

ಬೆಂಗಳೂರು: ‘ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬಿರುಸಿನ ರಾಜಕೀಯ ಚಟುವಟಿಕೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಲ್ಲಿ ದೆಹಲಿಯಲ್ಲಿ ರಾಜನಾಥ್ ಸಿಂಗ್ ಪಕ್ಷಕ್ಕೂ ಕರ್ನಾಟಕದ ಬೆಳವಣಿಗೆಗೂ ಸಂಬಂಧವಿಲ್ಲ ಅಂತಾರೆ’ ಇವರ ಮಾತುಗಳನ್ನು ನೀವು ನಂಬ್ತೀರಾ’ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಾಯಿಮಾತಿನಲ್ಲಿ ಯಡಿಯೂರಪ್ಪ ಮೈತ್ರಿ ಸರ್ಕಾರ ಬೀಳಿಸುವ ಪ್ರಯತ್ನ ನಾನು ಮಾಡ್ತಿಲ್ಲ ಎನ್ನುತ್ತಾರೆ. ಅದರೆ ಅವರ ನಂಬಿಕಸ್ತ ಆಪ್ತರೇ ನಮ್ಮ ಶಾಸಕರನ್ನು ಮುಂಬೈಗೆ ಕಳಿಸುತ್ತಿದ್ದಾರೆ. ಇದೆಲ್ಲಾ ಏನು’ ಎಂದು ಕೇಳಿದರು.

‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಸರ್ಕಾರ ಮುಂದುವರಿಯುತ್ತೆ’ ಎಂದು ಸ್ಪಷ್ಟಪಡಿಸಿದರು.

 

ಬರಹ ಇಷ್ಟವಾಯಿತೆ?

 • 18

  Happy
 • 6

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !