ಪಕ್ಷಕ್ಕೆ ದ್ರೋಹ ಮಾಡಿ ಪಲಾಯನಗೈದ ಚಂದ್ರಶೇಖರ್: ಸದಾನಂದ ಗೌಡ ಕಿಡಿ

7

ಪಕ್ಷಕ್ಕೆ ದ್ರೋಹ ಮಾಡಿ ಪಲಾಯನಗೈದ ಚಂದ್ರಶೇಖರ್: ಸದಾನಂದ ಗೌಡ ಕಿಡಿ

Published:
Updated:

ಬೆಂಗಳೂರು: ರಾಮನಗರದ ಅಭ್ಯರ್ಥಿ ಚಂದ್ರಶೇಖರ್ ಆಸೆ ಆಮಿಷಗಳಿಗೆ ಬಲಿಯಾಗಿ ದ್ರೋಹ ಮಾಡಿ ಪಲಾಯನ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.

ದ್ರೋಹ ಎಸಗುವ ಕಾಂಗ್ರೆಸ್‌ನ ರಕ್ತ ಗುಣ ಅವರಿಂದ ಹೋಗಿರಲಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಸದಾನಂದಗೌಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಬೇಸತ್ತಿದ್ದೇನೆ ಎಂದು ನಮ್ಮ ಪಕ್ಷ ಸೇರಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಅವರಿಗೆ ಟಿಕೆಟ್ ನೀಡಲಾಯಿತು. ಆದರೆ ಈಗ ಅವರು ವಿದ್ರೋಹ ಮಾಡಿದರು. ಇದೇ ಕುತ್ಸಿತ ಉದ್ದೇಶದಿಂದಲೇ ಬಿಜೆಪಿ ಸೇರಿರಬಹುದು. ಅವರಿಗೆ ರಾಮನಗರದ ಜನ ಮತ್ತು ದೇವರು ಕ್ಷಮಿಸುವುದಿಲ್ಲ. ಅವರ ರಾಜಕೀಯ ಭವಿಷ್ಯವೂ ಇಲ್ಲಿಗೆ ಮುಗಿಯುತ್ತದೆ ಎಂದರು.

ಇದನ್ನೂ ಓದಿ...
ರಾಮನಗರ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !