ಭಾನುವಾರ, ಅಕ್ಟೋಬರ್ 20, 2019
22 °C

ದಸರಾ ಛಾಯಾಚಿತ್ರ ಸ್ಪರ್ಧೆ; ₹ 1 ಲಕ್ಷ ಬಹುಮಾನ

Published:
Updated:

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ‘ದಸರಾ ಛಾಯಾಚಿತ್ರ ಸ್ಪರ್ಧೆ’ ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅತ್ಯುತ್ತಮ ಛಾಯಾಚಿತ್ರವೊಂದಕ್ಕೆ ₹ 1ಲಕ್ಷ ಬಹುಮಾನ ನೀಡುತ್ತಿದ್ದು, ಆಸಕ್ತರು ಈ ಬಾರಿಯ ದಸರಾ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಿಕೊಡಬೇಕು ಎಂದು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಒಬ್ಬರು ಮೂರು ಛಾಯಾಚಿತ್ರಗಳನ್ನು ಕೊಡಬಹುದು. ಅರ್ಜಿಗಳನ್ನು www.mysoredasara.gov.in ನಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಹೋಟೆಲ್ ಮಯೂರ ಹೊಯ್ಸಳ, ಜೆ.ಎಲ್.ಬಿ ರಸ್ತೆ, ಮೈಸೂರು ಇಲ್ಲಿಗೆ ಅ.14ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು.

Post Comments (+)