ಶುಕ್ರವಾರ, ಜೂನ್ 18, 2021
21 °C

ನಕ್ಕಳಾ ಸುಂದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೈತಲೆಯ ತುಂಬ ಸಿಂಧೂರ, ಮೊಗದ ತುಂಬ ನಗು. ಅಭಿಮಾನಿಗಳತ್ತ ಕೈ ತೋರಿಸಿದರೆ, ಅಂಗೈ ಮದರಂಗಿಯಲ್ಲಿ ಪತಿಯಾದ ಪ್ರಿಯಕರನ ಹೆಸರು. ದೀಪಿಕಾ ಪಡಕೋಣೆ ಸಿಂಧಿ ಸಂಸ್ಕೃತಿ ಪ್ರಕಾರ ಮದುವೆಯ ಸಂಪ್ರದಾಯದಂತೆ ಮದರಂಗಿಯ ವಿನ್ಯಾಸದಲ್ಲಿ ತಮ್ಮ ಸಂಗಾತಿಯ ಹೆಸರನ್ನು ಬರೆದುಕೊಂಡಿದ್ದಾರೆ.

ರಣಬೀರ್‌ ಸಿಂಗ್‌ ಸಹ ತಾವೇನೂ ಕಡಿಮೆಯಿಲ್ಲವೆಂಬಂತೆ ಅಂಗೈನಲ್ಲಿ ದೀಪದ ಚಿತ್ರ ಬಿಡಿಸಿಕೊಂಡಿದ್ದಾರೆ. ಮದುವೆಯ ಕೆಲ ಚಿತ್ರಗಳನ್ನು ತಾವೇ ಪೋಸ್ಟ್‌ ಮಾಡಿದ ಈ ಜೋಡಿ, ಮುಂಬೈಗೆ ಬಂದಿಳಿದ ತಕ್ಷಣ ಫೋಟೊಕ್ಕೆ ಪೋಸ್‌ ನೀಡಲಾರಂಭಿಸಿದರು. ಏರ್‌ಪೋರ್ಟ್‌ನಿಂದಲೇ ಈ ಜೋಡಿಯ ಅಭಿಮಾನಿಗಳು ಅಭಿನಂದನೆಯ ಸುರಿಮಳೆಗೈದರು.

ರಣಬೀರ್‌ ಮನೆ ಪ್ರವೇಶಿಸಿದ ದೀಪಿಕಾ, ಚಿತ್ರ ತೆಗೆಯಲೆಂದೇ ಹೊರ ಬಂದರು. ಎಣಿಸಿಟ್ಟ ಕ್ಷಣಗಳಂತೆ 60 ಸೆಕೆಂಡ್‌ ಆಚೆ ನಗುಬೀರುತ್ತ ನಿಂತರು. ಫೋಟೊಗ್ರಾಫರ್‌ಗಳಿಗೆ ಖುಷಿಯಾಗುವಂತೆ ದೀಪಿಕಾಳನ್ನು ರಣಬೀರ್‌ ಬರಸೆಳೆದು ನಿಂತರೆ, ಅದಕ್ಕೆ ಅನುವಾಗುವಂತೆ ದೀಪಿಕಾ ಸಹ ಸಹಕರಿಸಿದರು.

ಇಟಲಿಯ ಕೋಮ ಸರೋವರದಲ್ಲಿ ಮದುವೆಯಾದ ಜೋಡಿ ಸೋಮವಾರ ಬೆಳಗ್ಗೆ ಮುಂಬೈಗೆ ಬಂದಿಳಿಯಿತು. ಅಪ್ಪಟ ರೇಷ್ಮೆಯ ಕೆನೆಬಣ್ಣದ ವಸ್ತ್ರಧರಿಸಿದ್ದ ಇಬ್ಬರೂ ಮ್ಯಾಚಿಂಗ್‌ ಮಾಡಿಕೊಂಡಂತೆ ಕಾಣುತ್ತಿದ್ದರು. ರಣಬೀರ್‌ ಆನೆಯ ಪ್ರಿಂಟ್‌ ಇರುವ ಕೆಂಬಣ್ಣದ ಜಾಕೆಟ್‌ ಧರಿಸಿದ್ದರೆ, ಕೆಂಬಣ್ಣದ ದುಪ್ಪಟ್ಟಾ ಹೊದ್ದು ದೀಪಿಕಾ ನಗೆಮಿಂಚು ಸೂಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು