ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜೈ ಶ್ರೀರಾಮ್‌ ಎಂಬ ಹಿಂಸೆಯೂ, ಹೇ ರಾಮ್‌ ಎಂಬ ಅಹಿಂಸೆಯೂ’: ದೇವನೂರ ಮಹಾದೇವ

Last Updated 29 ಸೆಪ್ಟೆಂಬರ್ 2019, 9:53 IST
ಅಕ್ಷರ ಗಾತ್ರ

ಬೆಂಗಳೂರು: ‘ಜೈಶ್ರೀರಾಮ್‌ ಎಂಬ ಹಿಂಸೆಯು, ಹೇ ರಾಮ್‌ ಎಂಬ ಅಹಿಂಸೆಯನ್ನು ಭಾರತದಿಂದ ಹೊರಹಾಕಲು ಇಂದು ಟೊಂಕ ಕಟ್ಟಿ ನಿಂತಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಡಿ.ಎಸ್. ನಾಗಭೂಷಣ್‌ ಅವರ ‘ಗಾಂಧಿ ಕಥನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧಿಯನ್ನು ಕೊಂದ ಗೋಡ್ಸೆ ಪ್ರೇತ ವಿದೇಶಕ್ಕೆ ಭೇಟಿ ಕೊಟ್ಟಿತು ಎಂದುಕೊಳ್ಳೋಣ. ತಾನು ಎಲ್ಲಿಂದ ಬಂದೆ ಎಂದು ಹೇಳಬೇಕಾಗಿ ಬಂದರೆ, ತಾನು ಬುದ್ಧನ ನಾಡಿನಿಂದಲೋ, ಗಾಂಧಿ ಅಥವಾ ಅಂಬೇಡ್ಕರ್‌ ನಾಡಿನಿಂದ ಬಂದೆ ಎಂತಲೋ ಹೇಳಿಕೊಳ್ಳಬೇಕು. ಹೀಗೆ ಹೇಳಿಕೊಳ್ಳದೆ ಬೇರೆ ದಾರಿಯೇ ಇಲ್ಲ’ ಎಂದರು.

‘ವರ್ತಮಾನದಲ್ಲಿ ಕೂಡ ಗೋಡ್ಸೆ ವಿಚಾರಧಾರೆಯ ಸಂತಾನಗಳು ವಿದೇಶಕ್ಕೆ ಹೋದರೆ ಇದೇ ಮಾತು ಹೇಳಬೇಕು. ಇತ್ತೀಚೆಗೆ ತಾನೆ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ತಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ, ಯುದ್ಧವನ್ನಲ್ಲ ಎಂದು ಹೇಳಿದ್ದಾರೆ’ ಎಂದು ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT