ಹಿಂದೆ ದಂಗೆಯ ಮಾತಾಡಿದ್ದರು, ಈಗ ದೇವೇಗೌಡರ ಕುಟುಂಬ ದೌರ್ಜನ್ಯ ಎಸಗಿದೆ: ಬಿಜೆಪಿ

7

ಹಿಂದೆ ದಂಗೆಯ ಮಾತಾಡಿದ್ದರು, ಈಗ ದೇವೇಗೌಡರ ಕುಟುಂಬ ದೌರ್ಜನ್ಯ ಎಸಗಿದೆ: ಬಿಜೆಪಿ

Published:
Updated:

ಬೆಂಗಳೂರು: ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಬಿಜೆಪಿ ವಿರುದ್ಧ ದಂಗೆ ಏಳಿಸುವ ಮಾತಾಡಿದ್ದರು. ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಅದರಿಂದ ಪ್ರಚೋದನೆಗೊಂಡು ಜನಪ್ರತಿನಿಧಿ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ದೇವೇಗೌಡರ ಕುಟುಂಬದ ದೌರ್ಜನ್ಯಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಅಗತ್ಯವಿಲ್ಲ ಎಂದು ಆಪಾದಿಸಿ ರಾಜ್ಯ ಬಿಜೆಪಿ ಟ್ವಿಟ್‌ ಮಾಡಿದೆ.

‘ದೇವೇಗೌಡರಿಗೆ ವಯಸ್ಸಾಯಿತು, ಕುಮಾರಸ್ವಾಮಿಗೆ ಆರೋಗ್ಯ ಸರಿ ಇಲ್ಲ. ಇಬ್ಬರೂ ಹೋದರೆ ಪಕ್ಷಕ್ಕೆ ಉಳಿಗಾಲ ಇಲ್ಲ’ ಎಂದು ಪ್ರೀತಂ ಗೌಡ ಮಾತನಾಡಿರುವುದು ಆಡಿಯೊದಲ್ಲಿದೆ. ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಜತೆಗೆ ಇದೇ ವಿಷಯನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಕಾರ್ಯಕರ್ತರು ಪ್ರೀತಂ ಗೌಡ ನಿವಾಸದ ಎದುರು ಇಂದು ಪ್ರತಿಭಟನೆಯನ್ನೂ ಮಾಡಿದ್ದಾರೆ. ಈ ವೇಳೆ ಬಿಜೆಪಿಯ ಕಾರ್ಯಕರ್ತನಿಗೆ ಕಲ್ಲೇಟು ಬಿದ್ದು, ಗಾಯಗೊಂಡಿದ್ದಾರೆ. 

* ಇವನ್ನೂ ಓದಿ

ನನ್ನ ಕುಟುಂಬದವರ ಕೊಲೆಗೆ ಯತ್ನ: ಶಾಸಕ ಪ್ರೀತಂಗೌಡ ಗಂಭೀರ ಆರೋಪ

ಹಾಸನ: ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್‌ ಕಾರ್ಯಕರ್ತರಿಂದ ಕಲ್ಲು ತೂರಾಟ

ಬಿಜೆಪಿ ವಿರುದ್ಧ ದಂಗೆ ಏಳಲು ಜನರಿಗೆ ಹುಟ್ಟೂರಿನಿಂದಲೇ ಸಿಎಂ ಕುಮಾರಸ್ವಾಮಿ ಕರೆ

* ‘ದಂಗೆಗೆ ಕರೆ ಕೊಡುತ್ತೇವೆ’; ಬಿಜೆಪಿಗೆ ಸಿಎಂ ಕುಮಾರಸ್ವಾಮಿ ಎಚ್ಚರಿಕೆ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !