ಜಾರಿ ಬಿದ್ದ ಎಚ್‌.ಡಿ. ದೇವೇಗೌಡ, ಬಲಗಾಲಿಗೆ ಸಣ್ಣ ಗಾಯ

7

ಜಾರಿ ಬಿದ್ದ ಎಚ್‌.ಡಿ. ದೇವೇಗೌಡ, ಬಲಗಾಲಿಗೆ ಸಣ್ಣ ಗಾಯ

Published:
Updated:

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. 

ಪದ್ಮನಾಭನಗರದ ತಮ್ಮ ನಿವಾಸದಲ್ಲಿ ದೇವೇಗೌಡರು ಶೌಚಾಲಯಕ್ಕೆ ಹೋಗಿದ್ದಾಗ ಜಾರಿ ಬಿದ್ದಿದ್ದಾರೆ. ಇದರಿಂದ ಅವರ ಬಲಗಾಲಿಗೆ ಪೆಟ್ಟಾಗಿದ್ದು ವೈದ್ಯರು ಚಿಕಿತ್ಸೆ ನೀಡಿ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. 

ಜಾರಿ ಬಿದ್ದಿರುವುದರಿಂದ ಅವರ ಕಾಲಿಗೆ ಸ್ವಲ್ಪ ಪೆಟ್ಟಾಗಿದೆ ಅಷ್ಟೆ, ಅವರ ಕಾಲಿನ ಮೂಳೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಅವರು ಆರೋಗ್ಯವಾಗಿದ್ದಾರೆ ಎಂದು ದೇವೇಗೌಡರ ಆಪ್ತಮೂಲಗಳು ತಿಳಿಸಿವೆ.  

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !