ಶನಿವಾರ, ಜೂಲೈ 4, 2020
24 °C

ಡಿ.ಕೆ.ಶಿವಕುಮಾರ್ ನೀವಿನ್ನೂ ಅಧಿಕೃತ ಕೆಪಿಸಿಸಿ ಅಧ್ಯಕ್ಷರಲ್ಲ: ಆರ್.ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಡಿ. ಕೆ. ಶಿವಕುಮಾರ್ ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುತ್ತಾರೆ. ಎಲ್ಲದಕ್ಕು ನಾನು ಕೊಡುತ್ತೇನೆ ಎನ್ನುತ್ತಾರೆ. ಅವರದ್ದು ಆಡಂಬರ, ಇದು ಹುಡುಗಾಟಿಕೆ ಎಂದು ಸಚಿವ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರೆ ನೀವು ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುವುದು ಬೇಡ. ಅದಕ್ಕಾಗಿ ನಮ್ಮ ಸರ್ಕಾರ ಕ್ರಮಕೈಗೊಂಡಿದೆ ನೀವು ಹಿಂದೆ ಕೊಟ್ಟ ಚೆಕ್ ನ್ನು ನಮ್ಮವರು ಇನ್ನು ಸ್ವೀಕರಿಸಿಲ್ಲ.
ನೀವು ಇನ್ನು ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಅಧ್ಯಕ್ಷರಾದ ಮೇಲೆ ನೀವು ಚೆಕ್ ಗೆ ಸಹಿ ಮಾಡಲು ಅರ್ಹರು ಎಂದು ಹೇಳಿಕೆ ನೀಡಿದ್ದಾರೆ.

ಟೀಕೆಗಳಿಂದ ಕೊರೊನಾ ಹೋಗಲ್ಲ. ಕೊರೊನಾ ನಿಯಂತ್ರಣಕ್ಕೆ ಒಗ್ಗಟ್ಟಿಂದ ಹೋರಾಡೋಣ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು