ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯೋತ್ಸವಗಳೆಂದರೆ ಹಿಂಸೆ:ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ

‘ಟಿ. ಸುನಂದಮ್ಮ ಸಾಹಿತ್ಯ ಸಂಪುಟ–2’ ಪುಸ್ತಕ ಬಿಡುಗಡೆ
Last Updated 13 ಜನವರಿ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಅಶ್ಲೀಲತೆ, ದ್ವಂದ್ವಾರ್ಥವೇ ಪ್ರಧಾನವಾಗಿರುವ ಈಗಿನ ಹಾಸ್ಯೋತ್ಸವಗಳೆಂದರೆ ನನಗೆ ಮಾನಸಿಕ ಹಿಂಸೆ ಎನಿಸುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೂ ಬೇಸರವಾಗುತ್ತದೆ’ ಎಂದು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಟಿ.ಸುನಂದಮ್ಮ ಸಾಹಿತ್ಯ ಸಂಪುಟ-2’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಬೀಚಿಯವರದು ಹರಿತವಾದ ಹಾಸ್ಯವಾಗಿತ್ತು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರದು ದೈವಿಕ ಹಾಸ್ಯವಾಗಿತ್ತು. ಆದರೆ, ಸುನಂದಮ್ಮ ರಚಿಸಿದ ಹಾಸ್ಯ ಸಾಹಿತ್ಯ ಘನತೆಯುಳ್ಳದ್ದಾಗಿತ್ತು’ ಎಂದು ಸ್ಮರಿಸಿದರು.

ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ, ‘ನೋವಿನಲ್ಲಿಯೂ ನಗುವುದು ಅಥವಾ ನಗಿಸುವುದು ನಿಜವಾದ ಶಕ್ತಿ. ನೋವುಗಳಿಂದ ಬಿಡುಗಡೆ ಹೊಂದುವ ದಾರಿಯಾಗಿ ಹಾಸ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದವರು ಸುನಂದಮ್ಮ’ ಎಂದು ಹೇಳಿದರು.

‘ಹಾಸ್ಯ ಬರವಣಿಗೆ ಎನ್ನುವುದು ಮುಗ್ಧತೆ, ಅಜ್ಞಾನ ಅಥವಾ ಪಲಾಯನವಾದವಲ್ಲ. ಮನಸನ್ನು ಕೃತ್ಯವಾಗಿಸುವ ಸಂಗತಿ ಹಾಸ್ಯದಲ್ಲಿದೆ. ನಗಿಸುವುದನ್ನು ಸಾಧ್ಯವಾಗುವಂತೆ ಮಾಡುವುದೇ ನಿಜವಾದ ಸವಾಲು. ಹಾಸ್ಯವನ್ನು ಅಂತಹ ಶಕ್ತಿ ಮತ್ತು ಚೈತನ್ಯದಿಂದ ಬರೆದವರು ಸುನಂದಮ್ಮನವರು’ ಎಂದರು.

ನಟ ‘ಮುಖ್ಯಮಂತ್ರಿ’ ಚಂದ್ರು, ‘ಆರೋಗ್ಯಕರವಾದ ಮತ್ತು ಸರಳ, ಸುಲಭವಾದ ಹಾಸ್ಯವನ್ನು ಸುನಂದಮ್ಮ ರಚಿಸಿದ್ದಾರೆ. ಓದುಗರ ಸಂಕ್ಯೆ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಸುನಂದಮ್ಮ ಅವರ ಬರಹಗಳು ಓದುವಿಕೆಯ ಬಗ್ಗೆ ಆಸಕ್ತಿ ಮೂಡಿಸುತ್ತವೆ. ಅವರದು ಅಶ್ಲೀಲ, ದ್ವಂದ್ವಾರ್ಥವಿಲ್ಲದ ಶುದ್ಧ ಹಾಸ್ಯ ಸಾಹಿತ್ಯ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT