ಬಳ್ಳಾರಿ: ಕೊನೆ ಕ್ಷಣದಲ್ಲೂ ಮತದಾರರ ಮನವೊಲಿಕೆಗೆ ಯತ್ನ

7

ಬಳ್ಳಾರಿ: ಕೊನೆ ಕ್ಷಣದಲ್ಲೂ ಮತದಾರರ ಮನವೊಲಿಕೆಗೆ ಯತ್ನ

Published:
Updated:

ಹೊಸಪೇಟೆ: ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಿದ್ದು, ಮತದಾನ ಆರಂಭವಾಗಿ ಒಂದುವರೆ ಗಂಟೆಯಾದರೂ ಮತದಾರರಲ್ಲಿ ಉತ್ಸಾಹ ಕಂಡು ಬರುತ್ತಿಲ್ಲ.

ಇಲ್ಲಿನ ಪಟೇಲ್ ನಗರ, ಸರ್ಕಾರಿ ಬಾಲಕಿಯರ ಶಾಲೆ, ಚಿತ್ತವಾಡ್ಗಿಯ ವಿನೋಭಾ ಭಾವೆ ಸರ್ಜಾರಿ ಶಾಲೆ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಲು ಬೆರಳೆಣಿಕೆಯಷ್ಟು ಮತದಾರರು ಸಾಲಿನಲ್ಲಿ ನಿಂತಿದ್ದರು.

ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಮಾಡಿದ್ದು, ಪೊಲೀಸರು ಹಾಗೂ ಅರೆಸೇನಾ ಪಡೆಗಳ ವಾಹನಗಳು ಮೇಲಿಂದ ಮೇಲೆ ಗಸ್ತು ತಿರುಗುತ್ತಿವೆ.

ಮತಗಟ್ಟೆಗಳಿಂದ ಇನ್ನೂರು ಮೀಟರ್ ದೂರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು, ಕೊನೆ ಕ್ಷಣ ಕೂಡ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.


ಹೊಸಪೇಟೆಯಲ್ಲಿ ಮತಗಟ್ಟೆ ಮುಂಭಾಗದಲ್ಲೇ ನಿಂತುಕೊಂಡು ಮತದಾರರಿಗೆ ವಾಹನ ವ್ಯವಸ್ಥೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಕಳಿಸುತ್ತಿದ್ದರು ಯಾರು ಅದನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !