ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಅಣಕು ಮತದಾನದ ಸಮಸ್ಯೆ; ವಿವಿಪ್ಯಾಟ್ ಸ್ಲಿಪ್ ಎಣಿಕೆಗೆ ನಿರ್ಧಾರ

Last Updated 23 ಮೇ 2019, 6:59 IST
ಅಕ್ಷರ ಗಾತ್ರ

ಬೆಳಗಾವಿ: ಅಣಕು ಮತದಾನ ನಡೆದ ನಂತರ ಮತಗಳನ್ನು ಅಳಿಸಿ ಹಾಕದೆ, ಮತದಾನ ಮುಂದುವರಿಸಿದ್ದ ಮತಗಟ್ಟೆಗಳ ವಿವಿಪ್ಯಾಟ್ ಗಳ ಸ್ಲಿಪ್ ಗಳನ್ನು ತಾಳೆ ಹಾಕಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ.

ಇಂತಹ ಅಚಾತುರ್ಯ ಬೆಳಗಾವಿ ಲೋಕಸಭಾ ಕ್ಷೇತ್ರ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತಗಟ್ಟೆ ಸೇರಿದಂತೆ ರಾಜ್ಯದ 31 ಮತಗಟ್ಟೆಗಳಲ್ಲಿ ನಡೆದಿತ್ತು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಚುನಾವಣಾಧಿಯೊಬ್ಬರು 'ಪ್ರಜಾವಾಣಿ' ಗೆ ತಿಳಿಸಿದರು.

'ಅಣಕು ಮತದಾನದ ಸ್ಲಿಪ್ ಗಳು ಹಾಗೂ ನಿಜವಾದ ಮತದಾನದ ಸ್ಲಿಪ್ ಗಳನ್ನು ನಾವು ಪ್ರತ್ಯೇಕವಾಗಿ ಇಟ್ಟಿದ್ದೇವೆ. ಮತ ಎಣಿಕೆ ಪ್ರಕ್ರಿಯೆ ಮುಗಿದ ನಂತರ ಕೊನೆಯದಾಗಿ ಈ ಮತಗಟ್ಟೆಯ ಮತಗಳನ್ನು ವಿವಿ ಪ್ಯಾಟ್ ಸ್ಲಿಪ್ ಗಳ ಜೊತೆ ತಾಳೆ ಮಾಡಲಾಗುವುದು' ಎಂದರು.

'ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಸ್ಲಿಪ್ ಗಳನ್ನು ತಾಳೆ ಮಾಡಲಾಗುವುದು. ಇದರ ಜೊತೆಗೆ, ಅಣಕು ಮತದಾನ ಸಮಸ್ಯೆಯಾದ ಇವಿಎಂಗಳ ವಿವಿಪ್ಯಾಟ್ ಸ್ಲಿಪ್ ಗಳನ್ನೂ ತಾಳೆ ಮಾಡಲಾಗುವುದು. ಹೀಗಾಗಿ, ಇಂತಹ ಕ್ಷೇತ್ರಗಳಲ್ಲಿ ಒಟ್ಟು 6 ಸಲ ತಾಳೆ ಮಾಡುವ ಕೆಲಸ ನಡೆಯಲಿದೆ. ಹೀಗಾಗಿ ಅಂತಿಮ ಫಲಿತಾಂಶ ಪ್ರಕಟಿಸುವುದು ವಿಳಂಬವಾಗಲಿದೆ ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT