ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕ್ಸ್‌ಕಾನ್’ ಮೇಳಕ್ಕೆ ಇಂದು ತೆರೆ

Last Updated 13 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ನಿರ್ಮಾಣ ಸಲಕರಣೆಗಳ ದಕ್ಷಿಣ ಏಷ್ಯಾದ ಅತಿದೊಡ್ಡ ವ್ಯಾಪಾರ ಮೇಳ, ‘ಎಕ್ಸ್‌ಕಾನ್’ಗೆ ಉದ್ದಿಮೆ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಮೇಳಕ್ಕೆ ಶನಿವಾರ (ಡಿ. 14) ಕೊನೆಯ ದಿನವಾಗಿದೆ. ಹೆಚ್ಚಿನ ಸಂಖ್ಯೆ ಯಲ್ಲಿ ಉದ್ದಿಮೆ ಪ್ರತಿನಿಧಿಗಳು ಭೇಟಿ ನೀಡಲಿದ್ದಾರೆ ಎಂದು ಸಂಘಟಕರು ನಿರೀಕ್ಷಿಸಿದ್ದಾರೆ.

ಮೇಳದ ನಾಲ್ಕನೆ ದಿನವಾದ ಶುಕ್ರವಾರ ನಡೆದ ಸೇನಾಪಡೆಗಳ ಮೂಲಸೌಕರ್ಯ ಕುರಿತ ವಿಚಾರಗೋಷ್ಠಿಯಲ್ಲಿ ಉದ್ದಿಮೆ ಪರಿಣತರು ರಕ್ಷಣಾ ವಲಯಕ್ಕೆ ಲಭ್ಯ ಇರುವ ಹೊಸ ತಂತ್ರಜ್ಞಾನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಸಾರಿಗೆ ಮೂಲಸೌಕರ್ಯ ವಿಭಾಗದಲ್ಲಿ ತ್ವರಿತ ಗತಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ವಿವರಿಸಿದರು.

ಮೇಳದಲ್ಲಿ 21 ದೇಶಗಳ 390 ಕಂಪನಿಗಳು ಸೇರಿದಂತೆ ಒಟ್ಟಾರೆ 1,250 ಕಂಪನಿಗಳು ತಮ್ಮ ಅತ್ಯಾಧುನಿಕ ನಿರ್ಮಾಣ ಸಲಕರಣೆಗಳನ್ನು ಪ್ರದರ್ಶಿಸುತ್ತಿವೆ. 10ನೇ ಬಾರಿಗೆ ನಡೆಯುತ್ತಿರುವ ಮೇಳದಲ್ಲಿ ಜೆಸಿಬಿ ಇಂಡಿಯಾ, ಕೇಸ್‌ ಕನ್‌ಸ್ಟ್ರಕ್ಷನ್‌ ಈಕ್ವಿಪ್‌ಮೆಂಟ್‌, ಸ್ಕ್ಯಾನಿಯಾ ಕಮರ್ಷಿಯಲ್‌ ವೆಹಿಕಲ್ಸ್‌ ಇಂಡಿಯಾ, ಅಟ್ಲಾಸ್‌ ಕಾಪ್ಕೊ, ಅಶೋಕ್‌ ಲೇಲ್ಯಾಂಡ್‌ ಮತ್ತಿತರ ಕಂಪನಿ ಗಳು ಭಾಗವಹಿಸಿವೆ. ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮೇಳ ಸಂಘಟಿಸಿರುವ ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ತಿಳಿಸಿದೆ. ಗಲ್ಫ್‌ ಆಯಿಲ್‌ನ ಪ್ರಚಾರ ರಾಯಭಾರಿ ಆಗಿರುವ ಕ್ರಿಕೆಟಿಗ ಮಹೇಂದ್ರಸಿಂಗ್‌ ಧೋನಿ ಅವರು ಮೇಳದಲ್ಲಿನ ಮಳಿಗೆಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT