ಗುರುವಾರ , ಮೇ 28, 2020
27 °C

ರಾಮನಗರ | ಸೆಲ್ಫಿ ವಿಡಿಯೊ ಮಾಡಿ ಮಗಳೊಂದಿಗೆ ತಂದೆ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ಕಟಮಾನದೊಡ್ಡಿ ನಿವಾಸಿ ರಾಮಚಂದ್ರ (38) ಪುತ್ರಿ ವರ್ಷಾ ಜೊತೆ ಬುಧವಾರ ಬೆಳಗ್ಗೆ ಮನೆಯಲ್ಲಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ.

ರಾಮಚಂದ್ರ ಮಡದಿ, ಮಕ್ಕಳೊಂದಿಗೆ ರಾಮನಗರದಲ್ಲಿ ವಾಸವಿದ್ದರು. ಮಂಗಳವಾರ ರಾತ್ರಿ ಹೆಂಡತಿ ಜೊತೆ ಜಗಳ‌ ಮಾಡಿಕೊಂಡು ಕಟಮಾನದೊಡ್ಡಿಗೆ ಬಂದಿದ್ದರು. ಊರಿನ ಮನೆಯಲ್ಲಿ ಮೊದಲು ಮಗಳಿಗೆ ನೇಣು ಹಾಕಿದ ರಾಮಚಂದ್ರ, ಬಳಿಕ ತಾವೂ ನೇಣು ಬಿಗಿದುಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಸೆಲ್ಫಿ ವಿಡಿಯೊ‌ ಮಾಡಿದ್ದು, ಹೆಂಡತಿಯ ನಡತೆಯೇ‌ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅವರ ಪತ್ನಿ ಪರಾರಿ ಆಗಿದ್ದಾರೆ. ರಾಮನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು