ಗುರುವಾರ , ಏಪ್ರಿಲ್ 22, 2021
30 °C

ಹಣಕಾಸು ಮಸೂದೆ ಸರ್ಕಾರ ಬೀಳೋದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹಣಕಾಸು ಮಸೂದೆ ಬಿದ್ದು ಹೋದರೆ ಸರ್ಕಾರ ಉಳಿಯುತ್ತೊ ಇಲ್ಲವೊ ಎಂಬುದು ಅಪ್ರಸ್ತುತ ಪ್ರಶ್ನೆ’ ಎನ್ನುತ್ತಾರೆ ಹಿರಿಯ ವಕೀಲರಾದ ಎಸ್‌.ಎಸ್.ನಾಗಾನಂದ ಅವರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಹಣಕಾಸು ಮಸೂದೆ ಮಂಡನೆಗೂ ಸರ್ಕಾರದ ಅಳಿವು ಉಳಿವಿಗೂ ಸಂಬಂಧವಿಲ್ಲ. ಒಂದು ವೇಳೆ ಮಂಡನೆ ಆಗದಿದ್ದರೆ ಸರ್ಕಾರ ಹಣ ಖರ್ಚು ಮಾಡುವಂತಿಲ್ಲ. ಅಂತೆಯೇ ಸರ್ಕಾರಿ ನೌಕರರ ಸಂಬಳ ಸ್ಥಗಿತವಾಗುತ್ತದೆ’ ಎಂದು ವಿವರಿಸಿದರು.

‘ಸರ್ಕಾರದ ಅಳಿವು ಉಳಿವು ಏನಿದ್ದರೂ ಅದು ಬಹುಮತದ ಆಧಾರದ ಮೇಲೆ ನಿಂತಿರುತ್ತದೆ’ ಎಂದು ನಾಗಾನಂದ ಅವರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು