ಗೌರಿ ಲಂಕೇಶ್‌ ಹತ್ಯೆಗೆ ಒಂದು ವರ್ಷ: ಇಂದು ‘ಗೌರಿ ದಿನ’

7
ಚಿಂತಕರಿಂದ ‘ದಮನಿಸಲಾಗದ ದನಿಗಳು’ ಸಮಾವೇಶ

ಗೌರಿ ಲಂಕೇಶ್‌ ಹತ್ಯೆಗೆ ಒಂದು ವರ್ಷ: ಇಂದು ‘ಗೌರಿ ದಿನ’

Published:
Updated:

ಬೆಂಗಳೂರು: ಪತ್ರಕರ್ತೆ ಗೌರಿ ಹತ್ಯೆ ನಡೆದು ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ಬುಧವಾರ ‘ಗೌರಿ ದಿನ’ ಆಚರಿಸಲಾಗುತ್ತಿದ್ದು, ಇಡೀ ದಿನ ಹಲವು ವಿಚಾರ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. 

ಗೌರಿ ಲಂಕೇಶ್‌ ಬಳಗ, ಗೌರಿ ಮೆಮೋರಿಯಲ್‌ ಟ್ರಸ್ಟ್ ಜತೆಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ.

ಬೆಳಿಗ್ಗೆ 8ಕ್ಕೆ ಗೌರಿ ಅವರ ಸಮಾಧಿ ಬಳಿ ಶ್ರದ್ಧಾಂಜಲಿ ಸಲ್ಲಿಸಲಿರುವ ಚಿಂತಕರು, 10.30ಕ್ಕೆ ಮೌರ್ಯ ಹೋಟೆಲ್‌ ಬಳಿ ಸೇರಿ ‘ಮೋದಿ ಮೋದಿ, ಯಾರದು ಮುಂದಿನ ಸರದಿ’ ಘೋಷವಾಕ್ಯದೊಡನೆ ರಾಜಭವನದವರೆಗೆ ತೆರಳಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸ್ವಾಮಿ ಅಗ್ನಿವೇಶ್ ಚಾಲನೆ ನೀಡಲಿದ್ದಾರೆ. ಬಳಿಕ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ದಮನಿಸಲಾಗದ ದನಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ’ ನಡೆಯಲಿದೆ.

ಮಧ್ಯಾಹ್ನ 2.30ಕ್ಕೆ ‘ದನಿ–ಲೇಖನಿ’ ವಿಚಾರ ಸಂಕಿರಣ ನಡೆಯಲಿದೆ. ಪ್ರೊ.ವಿ.ಎಸ್‌.ಶ್ರೀಧರ್‌ ಆಶಯ ಭಾಷಣ ಮಾಡಲಿದ್ದಾರೆ. ಗೌರಿ ಕುರಿತು ನೂರ್‌ ಶ್ರೀಧರ್‌ ಮಾತನಾಡಲಿದ್ದಾರೆ. ಸಿದ್ಧಾರ್ಥ ವರದರಾಜನ್‌ ಅವರು ಗೌರಿ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಚಂದ್ರಶೇಖರ ಪಾಟೀಲ ಅವರು ಗೌರಿ ಹೆಸರಿನ ಲೇಖನಿ ಬಿಡುಗಡೆ ಮಾಡಲಿದ್ದಾರೆ. ಎ.ಕೆ.ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 

ಮಧ್ಯಾಹ್ನ 3.45ರಿಂದ ‘ಸನಾತನವಾದಿ ಭಯೋತ್ಪಾದನೆ ಎಚ್ಚರ –ಎಚ್ಚರಿಕೆ’ ವಿಚಾರಗೋಷ್ಠಿ ನಡೆಯಲಿದೆ. ಹೆಗ್ಗೋಡು ಪ್ರಸನ್ನ ಅವರು ಆಶಯ ಭಾಷಣ ಮಾಡಲಿದ್ದಾರೆ. ಉಮಾದೇವಿ ಕಲಬುರಗಿ, ಇಂದಿರಾ ಲಂಕೇಶ್‌, ಮೇಘನಾ ಪನ್ಸಾರೆ ಮಾತನಾಡಲಿದ್ದಾರೆ. ತೀಸ್ತಾ ಸೆಟಲ್ವಾಡ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 4.45ರಿಂದ ‘ಕಗ್ಗತ್ತಲಿನ ಕೋಲ್ಮಿಂಚು’ ಶೀರ್ಷಿಕೆಯ ವಿಚಾರಗೋಷ್ಠಿ ನಡೆಯಲಿದೆ. ದಿನೇಶ್‌ ಅಮೀನ್‌ ಮಟ್ಟು ಆಶಯ ಭಾಷಣ ಮಾಡಲಿದ್ದಾರೆ. ಗಿರೀಶ್‌ ಕಾರ್ನಾಡ್‌, ಪ್ರೊ.ನರೇಂದ್ರ ನಾಯಕ್‌, ಉಮರ್‌ ಖಾಲಿದ್‌ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸ್ವಾಮಿ ಅಗ್ನಿವೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 5.45ಕ್ಕೆ ‘ಪ್ರತಿರೋಧ ಭಾರತ’ ಗೋಷ್ಠಿ ನಡೆಯಲಿದೆ. ನಟ ಪ್ರಕಾಶ್‌ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಕೆ.ಎಲ್‌. ಅಶೋಕ್‌ ಆಶಯ ಭಾಷಣ ಮಾಡಲಿದ್ದಾರೆ. ಜಿಗ್ನೇಶ್‌ ಮೇವಾನಿ, ಕನ್ಹಯ್ಯ ಕುಮಾರ್‌, ಎಂ.ಎಸ್‌.ಆಶಾದೇವಿ ಮಾತನಾಡಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !