ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಮಾರಾಟದಲ್ಲಿ ದಾಖಲೆ: ಕಲಬುರ್ಗಿ ಜಿಲ್ಲೆಯ ರೈತರಲ್ಲಿ ಸಂತಸ

Last Updated 1 ಜುಲೈ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ರೈತರು ಈ ಬಾರಿಇಲ್ಲಿಯ ಎಪಿಎಂಸಿಯಲ್ಲಿ ದಾಖಲೆ ಪ್ರಮಾಣದ ಹತ್ತಿ ಮಾರಾಟ ಮಾಡಿದ್ದಾರೆ.

‘ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ ಹತ್ತಿಗೆ ₹5,550 ಬೆಂಬಲ ಬೆಲೆ ಘೋಷಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ₹3,300 ರಿಂದ ಗರಿಷ್ಠ ₹5,100 ದರವಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದ ಬೆಂಬಲ ಬೆಲೆ ಸಿಕ್ಕಿದ್ದರಿಂದ ರೈತರು ಖುಷಿಯಿಂದಲೇ ಹತ್ತಿ ಮಾರಿದ್ದಾರೆ’ ಎನ್ನುತ್ತಾರೆ ಕಲಬುರ್ಗಿ ಎಪಿಎಂಸಿ ಕಾರ್ಯದರ್ಶಿ ಶೈಲಜಾ.

ಜಿಲ್ಲೆಯಲ್ಲಿ ಎರಡೇ ಹತ್ತಿ ಮಿಲ್‌ಗಳಿದ್ದು, ರೈತರಿಂದ ಖರೀದಿಸಿದ ಹತ್ತಿಯನ್ನು ಇವುಗಳಿಗೆ ಪೂರೈಸಲಾಗಿದೆ.

ಸ್ಥಳೀಯ ಎಪಿಎಂಸಿಗಳಲ್ಲಿ ಈ ವರೆಗೆ ತೊಗರಿ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಹತ್ತಿ ಬೆಳೆಗಾರರು ಹೊರಗಿನ ಮಾರುಕಟ್ಟೆ–ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದರು. ಲಾಕ್‌ಡೌನ್‌ ಪರಿಣಾಮ ಹೊರಗಿನವರು ಖರೀದಿಗೆ ಬರಲಿಲ್ಲ. ಸರ್ಕಾರ ಉತ್ತಮ ಬೆಂಬಲ ಬೆಲೆ ಘೋಷಿಸಿದ್ದು, ರೈತರಿಗೆ ಅನುಕೂಲವಾಗಿದೆ.

‘ಪ್ರಸಕ್ತ ವರ್ಷ ಉತ್ತಮ ಇಳುವರಿ ಬಂದಿತ್ತು. 40 ಕ್ವಿಂಟಲ್‌ ಮಾರಾಟ ಮಾಡಿದ್ದೇನೆ. ಎಲ್ಲ ಖರ್ಚು ತೆಗೆದು ₹ 1.20 ಲಕ್ಷ ಉಳಿದಿದೆ’ ಎಂದು ಮಂದೇವಾಲದ ರೈತದಾವಲಸಾಬ್‌ ಬಾಷಾಸಾಬ್‌ ಖುಷಿ ಪಟ್ಟರು.

‘ನಾನು 200 ಕ್ವಿಂಟಲ್‌ ಹತ್ತಿ ಬೆಳೆದಿದ್ದೆ. ಲಾಕ್‌ಡೌನ್‌ ಕಾರಣ ಸಾಕಷ್ಟು ಆತಂಕ ಮೂಡಿತ್ತು. ಬೆಂಬಲ ಬೆಲೆ ನಮ್ಮ ಕೈಹಿಡಿಯಿತು’ ಎಂದು ಬಳಬಟ್ಟಿ ರೈತಷಣ್ಮುಖಪ್ಪ ಸಜ್ಜನ್ ಹೇಳಿದರು.

‘ಈಗಾಗಲೇ ಬಹುಪಾಲು ರೈತರಿಂದ ಹತ್ತಿ ಖರೀದಿಸಲಾಗಿದೆ. ಜೂನ್‌ 30ರಿಂದ ಖರೀದಿ ನಿಲ್ಲಿಸಿದ್ದೇವೆ’ ಎಂದುಜೇವರ್ಗಿಯ ಮಂಜೀತ್‌ ಕಾಟನ್‌ ಮಿಲ್‌ನ ವ್ಯವಸ್ಥಾಪಕ ಮಹೇಶ ಹೇಳಿದರು.

ಅಂಕಿ ಅಂಶ

5,962:ಬೆಂಬಲ ಬೆಲೆಯಲ್ಲಿ ಹತ್ತಿ ಮಾರಿದ ಜಿಲ್ಲೆಯ ರೈತರ ಸಂಖ್ಯೆ

1,66,338 ಕ್ವಿಂಟಲ್ :ಒಂದೂವರೆ ತಿಂಗಳಲ್ಲಿ ಖರೀದಿಸಿದ ಹತ್ತಿ

₹ 88.05 ಕೋಟಿ:ರೈತರ ಖಾತೆಗೆ ಸಂದಾಯವಾದ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT