ಶುಕ್ರವಾರ, ಜನವರಿ 17, 2020
21 °C

ರಾಜ್ಯದ ಎಲ್ಲ ಶಾಲೆಗಳಲ್ಲೂ ಇನ್ನು ಮುಂದೆ ‘ನೀರಿನ ಬೆಲ್‌’: ಕೇರಳ ಪ್ರೇರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ನೀರಿನ ವಿರಾಮ(water Bell) ಕೊಡಬೇಕು ಎಂದು ರಾಜ್ಯ ಸರ್ಕಾರ ಸೋಮವಾರ ಮಹತ್ವದ ಆದೇಶ ನೀಡಿದೆ. 

ಸರ್ಕಾರದ ಈ ಆದೇಶದ ಪ್ರಕಾರ ರಾಜ್ಯದ ಪ್ರತಿ ಶಾಲೆಗಳ ವಿದ್ಯಾರ್ಥಿಗಳು ನೀರು ಕುಡಿಯಲು ಬೆಳಗ್ಗೆ ಮತ್ತು ಮಧ್ಯಾಹ್ನ 10 ನಿಮಿಷಗಳ ವಿರಾಮ ಪಡೆಯಲಿದ್ದಾರೆ.  

ಸರ್ಕಾರದ ಈ ಹೊಸ ಆದೇಶವು ಪ್ರತಿ ಜಿಲ್ಲೆಗಳಿಗೂ ರವಾನೆಯಾಗಿದ್ದು, ಶಾಲೆಗಳಲ್ಲಿ ಬೆಳಗ್ಗಿನ ಎರಡು ಮತ್ತು ಮೂರನೇ ತರಗತಿಗಳ (ಪೀರ್ಯಡ್‌) ನಡುವೆ ಮತ್ತು ಮಧ್ಯಾಹ್ನದ 3 ಮತ್ತು 4ನೇ ತರಗತಿಗಳ ನಡುವೆ ನೀರು ಕುಡಿಯಲು ಅವಕಾಶ ನೀಡಲಾಗುತ್ತದೆ. 

ನೀರಿನ ಕಡಿಮೆ ಸೇವನೆ, ನೀರಿನ ಕೊರತೆಯ ಕಾರಣದಿಂದ ಮಕ್ಕಳಲ್ಲಿ ಬರಬಹುದಾದ ಅರೋಗ್ಯದ ಸಮಸ್ಯೆಗಳನ್ನು ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

ಇದನ್ನೂ ಓದಿ: ಕರ್ನಾಟಕದ ಶಾಲೆಗಳಲ್ಲಿಯೂ 'ವಾಟರ್‌ ಬೆಲ್‌' ಮೊಳಗಿಸಲು ಚಿಂತನೆ

ಕೇರಳದ ಮಾದರಿ 

ಮಕ್ಕಳು ಸಾಕಷ್ಟು ನೀರು ಕುಡಿಯಲು ಅನುಕೂಲವಾಗುವಂತೆ ಕೇರಳದ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಕೇರಳದಿಂದ ಪ್ರೇರಣೆಗೊಂಡಿರುವ ರಾಜ್ಯ ಸರ್ಕಾರ ಈ ಮಾದರಿಯನ್ನು ಇಲ್ಲಿಯೂ ಜಾರಿಗೆ ತಂದಿದೆ. ಕೇರಳದ ಈ ಮಾದರಿಯನ್ನು ರಾಜ್ಯದಲ್ಲಿಯೂ ಜಾರಿಗೆ ತರುವ ಇಂಗಿತವನ್ನು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ವ್ಯಕ್ತಪಡಿಸಿದ್ದಾರೆ. 

ಒಡಿಶಾದ ಗಂಜಾಂ ಜಿಲ್ಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ನೀರಿನ ವಿರಾಮ ನೀಡಲಾಗುತ್ತಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು