ಬುಧವಾರ, ಜೂನ್ 3, 2020
27 °C

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಬದಲಾವಣೆಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಬಯಸಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮಾರ್ಗ ಸೂಚಿ ಬಿಡುಗಡೆ ಮಾಡಿದ್ದಾರೆ. 

ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಬಯಸುವವರು ಹೀಗೆ ಮಾಡಬೇಕು

–ವ್ಯಾಸಂಗ ಮಾಡುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾವು ಸದ್ಯ ವಾಸ ಮಾಡುತ್ತಿರುವ ಮನೆಯ ಹತ್ತಿರದ ಪರೀಕ್ಷಾ ಕೇಂದ್ರವನ್ನು ಗುರುತಿಸಿ ಮುಖ್ಯ ಶಿಕ್ಷಕರ ಲಾಗಿನ್‌ ಮೂಲಕ ಬದಲಾಯಿಸಿಕೊಳ್ಳಬಹುದು. ಈ ಕುರಿತು ಪರೀಕ್ಷಾ ಮಂಡಳಿಯು ಎಲ್ಲ ಪ್ರೌಢಶಾಲಾ ಶಿಕ್ಷಕರಿಗೆ ಸುತ್ತೋಲೆ ಮೂಲಕ ಸೂಚನೆ ನೀಡಿದೆ. 

–ಬದಲಾವಣೆಗೆ 29–05–2020 ಕೊನೇ ದಿನ. ಬದಲಾವಣೆ ಮಾಡಿಕೊಳ್ಳದೇ ಹೋದರೆ, ಮೂಲ ಕೇಂದ್ರದಲ್ಲೇ ಪರೀಕ್ಷೆ ಬರೆಯಬೇಕು. ನಿಗದಿತ ಪರೀಕ್ಷಾ ಕೇಂದ್ರದ ತಾಲೂಕಿನ ಒಳಗೇ ಪರೀಕ್ಷಾ ಕೇಂದ್ರಗಳ ಬದಲಾವಣೆ ಇಲ್ಲ. 

–ಬದಲಾವಣೆ ಮಾಡಿಕೊಂಡರೂ ಹಳೇ ನೋಂದಣಿ ಸಂಖ್ಯೆಯೇ ಇರಲಿದೆ. 
ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡ ನಂತರ ಮೂಲ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. 

–ಬದಲಾವಣೆಗೂ ಮುನ್ನ ವಿದ್ಯಾರ್ಥಿಯು ವಸತಿ ಶಾಲೆ/ ವಸತಿ ನಿಲಯ/ ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದವ ವಿದ್ಯಾರ್ಥಿಯೆಂದು ಮುಖ್ಯ ಶಿಕ್ಷಕರು ಖಚಿಪಡಿಸಿಕೊಳ್ಳಬೇಕು. 

–ಬದಲಾವಣೆ, ಪ್ರವೇಶ ಪತ್ರ ಪಡೆಯಲು ಯಾವುದೇ ಶುಲ್ಕವಿಲ್ಲ. 

–ಅನುಮಾನಗಳಿದ್ದಲ್ಲಿ, 080–23310075, 23310076, 9739131393 ಗೆ ಸಂಪರ್ಕಿಸಬಹುದು. 

 

ಪರೀಕ್ಷಾ ಕೇಂದ್ರ ಬದಲಿಸಿಕೊಂಡ ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆಯುವುದು ಹೇಗೆ 

– ಮುಖ್ಯಶಿಕ್ಷಕರಿಂದ ವಾಟ್ಸಾಪ್‌ ಮೂಲಕ ಪಡೆದು ಪ್ರಿಂಟ್‌ಔಟ್‌ ಹಾಕಿಕೊಳ್ಳಬೇಕು. 

– ಬದಲಾವಣೆಗೊಂಡ ಕೇಂದ್ರದ ಶಾಲೆಯ ಮುಖ್ಯಶಿಕ್ಷಕರಿಂದಲೂ ಪಡೆಯಬಹುದು. 

– ಪ್ರಸ್ತುತ ವಾಸವಿರುವ ತಾಲೂಕಿನ ಶಿಕ್ಷಣಾಧಿಕಾರಿಯಿಂದಲೂ ಪಡೆಯಬಹದು. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು