ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಟೂರ್ನಿ: ಮೈಸೂರು ವಿಭಾಗದ ಪಾರಮ್ಯ

ಮಡಿಕೇರಿಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ
Last Updated 28 ಅಕ್ಟೋಬರ್ 2019, 14:29 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಸಾಯಿ ಹಾಕಿ ಮೈದಾನದಲ್ಲಿ ಭಾನುವಾರ ಸಂಜೆ ಮುಕ್ತಾಯವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗ ಪಾರಮ್ಯ ಮೆರೆಯಿತು.

ಶಿಕ್ಷಣ ಇಲಾಖೆ, ಇಬನ್ನಿವಳವಾಡಿ ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಡೆದ ಹಾಕಿ ಟೂರ್ನಿಯಲ್ಲಿ 17ರ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗವೂ ಸೇರಿದಂತೆ 14ರ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿಯೂ ಮೈಸೂರು ವಿಭಾಗ ಚಾಂಪಿಯನ್ ಆಯಿತು.

ಇನ್ನು 14 ವರ್ಷ ವಯೋಮಿತಿ ವಿಭಾಗದಲ್ಲಿ ಕಲಬುರ್ಗಿ ಬಾಲಕರ ತಂಡವು ಪ್ರಥಮ ಸ್ಥಾನ ಗಳಿಸಿತು.

14 ವರ್ಷ ಒಳಗಿನ ವಿಭಾಗ (ಬಾಲಕರ ತಂಡ)
ಕಲಬುರ್ಗಿ ವಿಭಾಗದ ತಂಡವು 9 ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು. 6 ಅಂಕಗಳೊಂದಿಗೆ ಮೈಸೂರು ದ್ವಿತೀಯ, 3 ಅಂಕ ಪಡೆದ ಬೆಳಗಾವಿ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

14 ವರ್ಷ ಒಳಗಿನ ವಿಭಾಗ (ಬಾಲಕಿಯರ ತಂಡ)
ಮೈಸೂರು ತಂಡವು 9 ಅಂಕ ಪಡೆದು, ಈ ವಿಭಾಗದಲ್ಲಿ ಚಾಂಪಿಯನ್‌ಆಯಿತು. ಬೆಳಗಾವಿ ತಂಡವು 6 ಅಂಕದೊಂದಿಗೆ ದ್ವಿತೀಯ, ಬೆಂಗಳೂರು ತಂಡವು 3 ಅಂಕದೊಂದಿಗೆ 3ನೇ ಸ್ಥಾನ, ಕಲಬುರ್ಗಿ ವಿಭಾಗವು ನಾಲ್ಕನೇ ಸ್ಥಾನ ಪಡೆಯಿತು.

17 ವರ್ಷ ಒಳಗಿನ ವಿಭಾಗ (ಬಾಲಕರ ವಿಭಾಗ)
15 ಅಂಕ ಪಡೆದ ಮೈಸೂರು ತಂಡವು ಮೊದಲ ಸ್ಥಾನ ಪಡೆದುಕೊಂಡರೆ, ಎಸ್‌ಎಸ್‌ಕೂಡಿಗೆ ತಂಡವು 12 ಅಂಕದೊಂದಿಗೆ ದ್ವಿತೀಯ, ಬೆಂಗಳೂರಿನ ಎಚ್‌ಎಸ್‌ಎಸ್‌ ತಂಡವು 9 ಅಂಕಗಳೊಂದಿಗೆ 3ನೇ ಸ್ಥಾನ, 6 ಅಂಕ ಪಡೆದ ಕಲಬುರ್ಗಿ ತಂಡವು ನಾಲ್ಕನೇ ಸ್ಥಾನ ಪಡೆಯಿತು.

17 ವರ್ಷ ಒಳಗಿನ ವಿಭಾಗ (ಬಾಲಕಿಯರ ತಂಡ)
12 ಅಂಕ ಪಡೆದ ಮೈಸೂರು ವಿಭಾಗ ತಂಡವು ಚಾಂಪಿಯನ್‌ಆಯಿತು. ಎಸ್‌ಎಸ್‌ಕೂಡಿಗೆ ತಂಡವು 9 ಅಂಕದೊಂದಿಗೆ ದ್ವಿತೀಯ, ಬೆಳಗಾವಿ ತಂಡವು 6 ಅಂಕದೊಂದಿಗೆ ತೃತೀಯ, 3 ಅಂಕದೊಂದಿಗೆ ಕಲಬುರ್ಗಿ ತಂಡ ನಾಲ್ಕನೇ ಸ್ಥಾನ ಪಡೆಯಿತು.

ವಿವಿಧ ಪಂದ್ಯಗಳ ಫಲಿತಾಂಶ
ಭಾನುವಾರ ನಡೆದ (14 ವರ್ಷ ಒಳಗಿನ ಬಾಲಕಿಯರ ವಿಭಾಗ) ಕಲಬುರ್ಗಿ ಹಾಗೂ ಬೆಂಗಳೂರು ತಂಡಗಳ ನಡುವೆ ಪಂದ್ಯದಲ್ಲಿ ಬೆಂಗಳೂರು ತಂಡವು 2–1 ಅಂತರದಲ್ಲಿ ಜಯ ಗಳಿಸಿತು. ಬೆಂಗಳೂರು ಪರ ಚೇತನಾ ಹಾಗೂ ಶ್ವೇತಾ ತಲಾ ಒಂದೊಂದು ಗೋಲು ದಾಖಲಿಸಿದರೆ, ಕಲಬುರ್ಗಿ ಪರ ಮೇಘನಾ 1 ಗೋಲು ದಾಖಲಿಸಿದರು.

17 ವಯೋಮಿತಿ ಒಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡ, ಐಎಚ್‌ಎಸ್ ಬೆಂಗಳೂರು ತಂಡದ ಎದುರು 1–3 ಅಂತರದಲ್ಲಿ ಸೋತಿತು. ಬೆಂಗಳೂರು ಪರ ಗೌರವ್ ಗಣಪತಿ, ವರುಣ್ ಬೋಪಣ್ಣ, ಮದನ್ ತಲಾ ಒಂದೊಂದು ಗೋಲು ದಾಖಲಿಸಿದರು. ಬೆಳಗಾವಿ ತಂಡದ ಪರ ಸೋಲಾಕ್ ಮಾರ‍್ತೆ ಒಂದು ಗೋಲು ದಾಖಲಿಸಿದರು.

ಮೈಸೂರು ಹಾಗೂ ಕೂಡಿಗೆ ನಡುವೆ ಪಂದ್ಯದಲ್ಲಿ ಮೈಸೂರು ತಂಡ, ಕೂಡಿಗೆ ತಂಡವನ್ನು 2-1 ಅಂತರದಲ್ಲಿ ಮಣಿಸಿತು. ಮೈಸೂರು ತಂಡದ ಪರ ಆರ್ಯನ್, ಚಂಗಪ್ಪ ಗೋಲು ದಾಖಲಿಸಿದರೆ, ಕೂಡಿಗೆ ತಂಡದ ಪರ ರಾಹುಲ್ ಒಂದು ಗೋಲು ದಾಖಲಿಸಿದರು.

17 ವರ್ಷ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ಹಾಗೂ ಕಲಬುರ್ಗಿ ತಂಡಗಳ ನಡುವೆಯ ಪಂದ್ಯದಲ್ಲಿ ಮೈಸೂರು ತಂಡವು 13–0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT