ಸೋಮವಾರ, ಸೆಪ್ಟೆಂಬರ್ 16, 2019
22 °C

ಮಠಗಳು ಭಯೋತ್ಪಾದನಾ ಕೇಂದ್ರಗಳಾಗದಿರಲಿ: ಹಂಪನಾ

Published:
Updated:
Prajavani

ಮೈಸೂರು: ‘ಮಠ, ಆಶ್ರಮಗಳು ಭಯೋತ್ಪಾದನೆಯ ಕೇಂದ್ರಗಳಾಗಬಾರದು’ ಎಂದು ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ತಿಳಿ ಹೇಳಿದರು.

ಇಲ್ಲಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಠಗಳಲ್ಲಿ ಉಗ್ರವಾದಿಗಳು ಸೃಷ್ಟಿ ಆಗಬಾರದು. ಬದಲಿಗೆ ಎಲ್ಲ ಜನರನ್ನೂ ಪ್ರೀತಿಸುವ ಪ್ರವೃತ್ತಿ ಬೆಳೆಯಬೇಕು. ಗುರುಗಳು ಈ ಬಗೆಯ ಪಾಠವನ್ನು ತಮ್ಮ ಶಿಷ್ಯಂದಿರಿಗೆ ಕಲಿಸಬೇಕು’ ಎಂದು ಸಲಹೆ ನೀಡಿದರು.

Post Comments (+)