ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ ಆಚರಣೆಗೆ ಒತ್ತಾಯ; ಜ.13ರಂದು ಪಾದಯಾತ್ರೆ

Last Updated 7 ಜನವರಿ 2019, 8:51 IST
ಅಕ್ಷರ ಗಾತ್ರ

ಬಳ್ಳಾರಿ: ಹಂಪಿ ಉತ್ಸವವನ್ನು ಆಚರಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆಯು ಜಿಲ್ಲೆಯ ಕಲಾವಿದರ ಸಹಯೋಗದಲ್ಲಿ ಜ.13ರಂದು ಹೊಸಪೇಟೆಯಿಂದ ಹಂಪಿಗೆ ಪಾದಯಾತ್ರೆ ನಡೆಸಲಿದೆಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಸ್ವಾಮಿ ಹೇಳಿದರು.

‘ಸರ್ಕಾರಕ್ಕೆ ಕಲಾವಿದರ ಪಾದಯಾತ್ರೆಯಿಂದಾದರೂ ನಾಚಿಕೆಯಾಗಿ ಮುಂದೆ ದಿನಾಂಕ ಘೋಷಿಸಿ ಆಚರಣೆಗೆ ಮುಂದಾಗುತ್ತದೆಯೇಎಂಬುದನ್ನು ನೋಡಬೇಕು’ ಎಂದು ಸೋಮವಾರ ನಗರದಲ್ಲಿಸುದ್ದಿಗೋಷ್ಟಿಯಲ್ಲಿ ಅಭಿಪ್ರಾಯಪಟ್ಟರು.

ಹಂಪಿ ಉತ್ಸವ ಇಡೀ ಉತ್ತರ ಕರ್ನಾಟಕದ ಕಲಾವಿದರ ಹಬ್ಬವಿದ್ದಂತೆ. ಪ್ರತಿವರ್ಷದಂತೆ ನವೆಂಬರ್ ತಿಂಗಳಿನಲ್ಲಿ ಉತ್ಸವ ನಡೆಯುತ್ತದೆ ಎಂದು ಕಾದಿದ್ದ ಜನತೆಗೆ ಬೇಸರವಾಗಿದೆ. ದಿನಾಂಕ ಬದಲಾಗಿ ದಿನಗಳು ಕಳೆದರೂ ಸರ್ಕಾರ ಉತ್ಸವ ಆಚರಣೆಗೆ ಮುಂದಾಗಲಿಲ್ಲ. ಅಧಿಕೃತ ಆದೇಶವೂ ಹೊರಬೀಳಲಿಲ್ಲ ಎಂದು ದೂರಿದರು.

ಬರಗಾಲದ ಕಾರಣದಿಂದ ಹಂಪಿ ಉತ್ಸವವನ್ನು ಸರಳವಾಗಿಯಾದರೂ ಆಚರಿಸಲು ಮನವಿ ಸಲ್ಲಿಸಿದ್ದೆವು. ಸಂಸದರೂ ಭರವಸೆ ಕೊಟ್ಟಿದ್ದರು ಆದರೆ ಬೇಡಿಕೆ ಈಡೇರಿಲ್ಲ ಎಂದರು.

ನಾಡಿನ ಸಂಸ್ಕೃತಿ ಬಿಂಬಿಸುವ ಹಂಪಿಉತ್ಸವವನ್ನು ಸ್ಥಳೀಯ ಸಂಸ್ಥೆ ಚುನಾವಣೆ ಅಥವಾ ಇನ್ನಿತರೆ ಕಾರಣಗಳಿಂದ ನಿಲ್ಲಿಸುವಂತಿಲ್ಲ. ಈ ಬಗ್ಗೆ ಧ್ಚನಿ ಎತ್ತದೇ ಇರುವ ಜಿಲ್ಲೆಯ ಜನಪ್ರತಿನಿಧಿಗಳು ಕಲಾವಿದರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತು ಬೆಂಬಲಿಸಬೇಕು ಎಂದು ಒತ್ತಾಯಿಸಿದರು.

ಕಲಾವಿದರರು ಉತ್ಸವ ನಡೆಯಲಿದೆ ಎಂದು ಆಶಾಭಾವದಿಂದ ಎದುರು ನೋಡುತ್ತಿದ್ದಾರೆ. ಕಲಾವಿದರ ಭಾವನೆಗಳೊಂದಿಗೆ ಆಟವಾಡದೇ ಬೇಗನೆ ಉತ್ಸಚ ಆಚರಿಸಬೇಕು ಎಂದು ಕಲಾವಿದೆ ಸುಭದ್ರಮ್ಮ ಮನ್ಸೂರು ಒತ್ತಾಯಿಸಿದರು.

ಕಲಾವಿದರಲ್ಲಿ ಸಂಘಟನೆಯ ಶಕ್ತಿ ಇಲ್ಲ‌‌. ಜಿಲ್ಲೆಯ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಹಿರಿಯ ಕಲಾವಿದ ಬೆಳಗಲ್ಲು ವೀರಣ್ಣ ಹೇಳಿದರು.

ಉತ್ಸವದಲ್ಲಿ ಸ್ಥಳಿಯ ಕಲಾವಿದರನ್ನು ಕಡೆಗಣಿಸುವಂತಿಲ್ಲ. ಬೇರೆ ಕಲಾವಿದರು ಇದ್ದರೂ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಭಿನಯ ಕಲಾಕೇಂದ್ರದ ಕೆ.ಜಗದೀಶ್ ಆಗ್ರಹಿಸಿದರು.

ಪಾದಯಾತ್ರೆಯ ಮೂಲಕ ಹಂಪಿಗೆ ತೆರಳಿ ಭಜನೆ, ರಂಗಗೀತೆ, ಏಕಪಾತ್ರಾಭಿನಯ ಹಾಗೂ ಇನ್ನಿತರೆ ಸಾಂಸ್ಕೃತಿಕ ಚಟುವಟಿಕಗಳ ಮೂಲಕ ಹಂಪಿ ಉತ್ಸವ ಆಚರಿಸಬೇಕೆಂದು ಒತ್ತಾಯಿಸಲಾಗುವುದು. ಮೂರು ದಿನದ ಒಳಗೆ ನಿರ್ಣಯ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರಲಿದ್ದೇವೆ ಎಂದು ಹೇಳಿದರು.

ಎಚ್.ಕೆ.ಗೌರಿಶಂಕರ್, ಕೋಳೂರು ಚಂದ್ರಬಸಪ್ಪ, ಜಾನೆಕುಂಟೆ ಡಿ.ದೊಡ್ಡಬಸಪ್ಪ, ಕೆ.ರವಿಕುಮಾರ್, ಎಚ್.ಎಂ.ಚಂದ್ರಶೇಖರ್, ರಜನೀಶ್, ಅಮರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT