ಸೋಮವಾರ, ಅಕ್ಟೋಬರ್ 21, 2019
22 °C

ಏಕತಾ ಪ್ರತಿಮೆ ವೀಕ್ಷಿಸಿದ ದೇವೇಗೌಡ: ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಹರ್ಷ

Published:
Updated:
Prajavani

ಬೆಂಗಳೂರು: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಶನಿವಾರ ಗುಜರಾತ್‌ನ ಸರ್ದಾರ್‌ ವಲ್ಲಭ ಭಾಯಿ ಪಟೇಲರ ಏಕತಾ ಪ್ರತಿಮೆ ವೀಕ್ಷಿಸಿದರು. ಗೌಡರ ಭೇಟಿಗೆ ಹರ್ಷ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ದೇವೇಗೌಡರು ಪ್ರತಿಮೆ ಬಳಿ ನಿಂತಿರುವ ಚಿತ್ರಗಳೊಂದಿಗೆ ಟ್ವೀಟ್‌ ಮಾಡಿರುವ ಮೋದಿ, ಏಕತಾ ಪ್ರತಿಮೆ(ಸ್ಟ್ಯಾಚು ಆಫ್‌ ಯುನಿಟಿ) ವೀಕ್ಷಣೆಗೆ ಭೇಟಿ ನೀಡಿರುವುದು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ಗುಜರಾತ್‌ನ ಕೆವೆಡಿಯಾದಲ್ಲಿರುವ ಸರ್ದಾರ್‌ ಸರೋವರ ಅಣೆಕಟ್ಟು ವೀಕ್ಷಣೆಗಾಗಿ ತೆರಳಿದ್ದರು. ಅದಕ್ಕೆ ಅಭಿಮುಖವಾಗಿರುವ, ಪಟೇಲರ ಏಕತಾ ಪ್ರತಿಮೆಗೆ ಗೌರವ ಅರ್ಪಿಸಿದರು. ಗಣ್ಯ ವ್ಯಕ್ತಿಗಳ ಭೇಟಿ ಪುಸ್ತಕದಲ್ಲಿ ಪ್ರತಿಮೆ ವಿನ್ಯಾಸ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿಪ್ರಾಯವನ್ನೂ ಗೌಡರು ದಾಖಲಿಸಿದ್ದಾರೆ.

Post Comments (+)