ಮಂಗಳವಾರ, ಜೂನ್ 22, 2021
28 °C

ಮಂಡ್ಯದವರನ್ನು ತುಚ್ಚವಾಗಿ ಕಂಡ ಬಿಎಸ್‌ವೈ ಇಂದು ಅವರ ಕಾಲ ಬಳಿ: ಎಚ್‌ಡಿಕೆ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಜೆಪಿ ಮಂಡ್ಯ ಜನರನ್ನು ತುಚ್ಛವಾಗಿ ಕಂಡಿತ್ತು. ಇಂದು ರಾಜಕೀಯಕ್ಕಾಗಿ ಬಿಜೆಪಿ ಮಂಡ್ಯ ಜನರ ಕಾಲ ಬಳಿ ಬಿದ್ದಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಬೂಕನಕೆರೆ ನನ್ನ ಜನ್ನಭೂಮಿ, ಕರ್ಮಭೂಮಿ ಎಂದು ಬರೆದುಕೊಟ್ಟ ಭಾಷಣವನ್ನು ಮಂಡ್ಯದಲ್ಲಿ ನಿಂತು ಯಡಿಯೂರಪ್ಪ ಅವರು ಹೇಳಿದ್ದು ಕೇಳಿ ನನಗೆ ತೀವ್ರ ಆಶ್ಚರ್ಯವಾಯ್ತು. 2018ರ ನನ್ನ ಬಜೆಟ್ನಲ್ಲಿ ಮಂಡ್ಯಕ್ಕೆ ನ್ಯಾಯವಾಗಿ ಅನುದಾನ ಕೊಟ್ಟದ್ದಕ್ಕೆ ನನ್ನನ್ನು 'ಮಂಡ್ಯದ ಸಿಎಂ' 'ಇದು ಮಂಡ್ಯ ಬಜೆಟ್' ಅಂದವರು ಇವರೇ ಅಲ್ಲವೇ? ರಾಜಕೀಯಕ್ಕಾಗಿ ಎಂಥ ಬೂಟಾಟಿಕೆ?

ಮಂಡ್ಯ ಜನರನ್ನು ಬಿಜೆಪಿ ತುಚ್ಛವಾಗಿ ಕಂಡಿತ್ತು. ಮಂಡ್ಯದ ಜನರನ್ನು ಮೂರನೇ ದರ್ಜೆಯವರಾಗಿ ಕಂಡಿದ್ದು ಬಿಜೆಪಿ. ಆದರೆ ಇಂದು ರಾಜಕೀಯಕ್ಕಾಗಿ ಮಂಡ್ಯ ಜನರ ಕಾಲ ಬಳಿ ಬಿದ್ದಿದೆ. ಎಂಥ ವಿಪರ್ಯಾಸ. ಯಡಿಯೂರಪ್ಪನವರೇ ಬಿಡಿ ನಿಮ್ಮ ಡೋಂಗಿತನವನ್ನು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು