ಬೆಂಗಳೂರು: ‘ಮಧು ಬಂಗಾರಪ್ಪ ಅವರಿಗೆ ಎಷ್ಟೂಂತ ಮಸ್ಕಾ ಹೊಡೆಯುವುದು. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ಮಧು ಅವರು ಕಾಂಗ್ರೆಸ್‌ಗೆ ಹೋಗಲಿದ್ದಾರೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ‘ಪಕ್ಷಕ್ಕೆ ಬರುವುದು, ಪಕ್ಷದಿಂದ ಹೋಗುವುದು ಸರ್ವೇ ಸಾಮಾನ್ಯ. ಬಹಳ ಜನ ಬರುತ್ತಾರೆ ಹೋಗುತ್ತಾರೆ. ಬಂದವರಿಗೆ ನನ್ನಿಂದ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎಂಬುದು ಮುಖ್ಯ’ ಎಂದು ಹೇಳಿದರು.

‘ಮಧು ನನ್ನಿಂದ ಏನು ಸಹಾಯ ಪಡೆದಿದ್ದಾರೆ. ನಾನು ಯಾವ ರೀತಿ ನಡೆದುಕೊಂಡಿದ್ದೇನೆ ಎಂಬುದು ಇಬ್ಬರಿಗೂ ಗೊತ್ತಿದೆ. ಮಾಡಿದ ಸಹಾಯದ ಬಗ್ಗೆ ಅವರಿಗೆ ಗೌರವ ಇದ್ದರೆ ಪಕ್ಷದಲ್ಲಿ ಇರಬಹುದು. ಅವರನ್ನು ಎಷ್ಟು ಬಾರಿ ಕರೆಯಬೇಕು. ಅವರಿಗೆ ನಾನು ಅಥವಾ ನನ್ನ ಪಕ್ಷ ಏನು ಅನ್ಯಾಯ ಮಾಡಿದೆ?. ನಮ್ಮ ಪಕ್ಷಕ್ಕಿಂತ ದೊಡ್ಡ ಪಕ್ಷದಲ್ಲಿ ಅವರಿಗೆ ಹೆಚ್ಚಿನ ಉಪಯೋಗವಾಗುತ್ತದೆ ಎಂದು ಅನ್ನಿಸಿದರೆ ಹೋಗಲಿ ಬಿಡಿ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮಧು ಅವರು ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.