ಸೋಮವಾರ, ಜನವರಿ 20, 2020
25 °C
ಯಾವ ಶಾಸಕರೂ ಜೆಡಿಎಸ್ ತೊರೆಯುವುದಿಲ್ಲ–ಎಚ್‌.ಡಿ. ಕುಮಾರಸ್ವಾಮಿ

ಜಿ.ಟಿ.ಡಿ ಏನೂ ಮಾಡಿಕೊಂಡಿಲ್ಲವಾ?: ಎಚ್‌.ಡಿ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಸಕ ಜಿ.ಟಿ ದೇವೇಗೌಡರು ಪಕ್ಷದಿಂದ ಏನೂ ಮಾಡಿಕೊಂಡಿಲ್ಲವಾ? ನನ್ನಿಂದ ಸ್ವಲ್ಪವೂ ಅವರಿಗೆ ಅನುಕೂಲ ಆಗಿಲ್ಲವಾ?’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

‘ನಾನು ಅವರಿಗಾಗಿ ಕೆಲಸ ಮಾಡು ತ್ತೇನೆ, ಎಲ್ಲ ಅಧಿಕಾರವವನ್ನು ಅವರೇ ಪಡೆದುಕೊಳ್ಳಲಿ, ಆದರೆ ಯಾರು ಯಾವಾಗ ಪಕ್ಷ ಬಿಟ್ಟು ಹೋಗುತ್ತಾರೆ ಎಂಬುದನ್ನು ಹೇಳುವುದಕ್ಕೆ ಆಗುತ್ತ ದೆಯೇ’ ಎಂದು ಅವರು ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೂತನ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿ,  ‘ನೀವೇ ನಮ್ಮ ಗುರುಗಳು ಅಂತ ಹೇಳುತ್ತಾರೆ, ಅವರೇ ಇವರಿಗೆ ಟೋಪಿ ಹಾಕಿ ಹೋಗಿದ್ದು ಗೊತ್ತಿಲ್ಲವೇ?’ ಎಂದು ಚುಚ್ಚಿದರು.

ಪಕ್ಷ ತೊರೆಯುವುದಿಲ್ಲ: ‘ಯಾವ ಶಾಸಕರೂ ಪಕ್ಷ ತೊರೆಯುವುದಿಲ್ಲ. ನನ್ನ ಷಷ್ಠ್ಯಬ್ದಪೂರ್ತಿ ಸಮಾರಂಭಕ್ಕೆ ಜಿ.ಟಿ. ದೇವೇಗೌಡರನ್ನು ಬಿಟ್ಟು ಎಲ್ಲರೂ ಬಂದು ಊಟ ಮಾಡಿ ಹೋಗಿದ್ದಾರೆ’ ಎಂದರು.

‘ಬಿಜೆಪಿ ಸರ್ಕಾರ ಸ್ಥಿರವಾಗಿರಲಿ ಎಂದು ನಾನೂ ಆಸೆಪಡು ತ್ತೇನೆ.  ಸರ್ಕಾರಕ್ಕೆ ನಾನಂತೂ ತೊಂದರೆ ಕೊಡುವುದಿಲ್ಲ. ನಾನು ಯಾವ ಶಾಸಕರನ್ನು ಖರೀದಿ ಮಾಡು ವುದಿಲ್ಲ. ಬಿಜೆಪಿಯ ಸಂಸ್ಕೃತಿಯೇ ಆಪರೇಷನ್ ಮಾಡುವಂತದ್ದು, ಅವರು ಮಾಡಲಿ’ ಎಂದು ಕುಮಾರಸ್ವಾಮಿ ಕುಟುಕಿದರು.

‘ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲುವು ಸಾಧಿಸುವುದು ಸತ್ಯ. ಕಳೆದ ಬಾರಿ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬಳಿಕ ಬಂದ ಸಾರ್ವತ್ರಿಕ ಚುನಾವಣೆಯಲ್ಲಿ ಎರಡೂ ಕಡೆ ಸೋತರು. ಕೆ.ಆರ್.ಪೇಟೆಯಲ್ಲಿ ಈ ಹಿಂದೆ ಕಾಂಗ್ರೆಸ್‌ನವರು ಗೆದ್ದಿದ್ದರು. ಜನ ಸುಭದ್ರ ಸರ್ಕಾರ ಬಯಸಿ ಮತ ಚಲಾಯಿಸಿದ್ದಾರೆ. ಸುಭದ್ರ ಸರ್ಕಾರ ನಡೆಸುವವರು ಜನರಿಗಾಗಿ ಒಳ್ಳೆಯ ಕೆಲಸ ಮಾಡಲಿ’ ಎಂದರು.

ತಲೆ ಕೆಡಿಸಿಕೊಳ್ಳುವುದಿಲ್ಲ: ‘ಇಂದಿರಾ ಕ್ಯಾಂಟೀನ್‌ಗೆ ಏನಾದರೂ ಹೆಸರು ಇಡಲಿ, ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು