ಸೋಮವಾರ, ಫೆಬ್ರವರಿ 24, 2020
19 °C

ವೈದ್ಯರ ಸಲಹೆ ಮೇರೆಗೆ ಎಚ್‌ಡಿಕೆ 10 ದಿನ ವಿಶ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪಚುನಾವಣೆ ಪ್ರಚಾರದ ವೇಳೆ ಮಾಜಿ‌ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಬಳಲಿದ್ದು ವೈದ್ಯರ ಸೂಚನೆ ಮೇರೆಗೆ ಅವರು 10 ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಪ್ರವಾಸ,ರಾಜಕೀಯ ನಾಯಕರು, ಸಾರ್ವಜನಿಕರ  ಭೇಟಿ ಮಾಡದೇ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಎಚ್‌ಡಿಕೆ ಸಾರ್ವಜನಿಕ ಭೇಟಿಗೆ ಲಭ್ಯವಿರುವುದಿಲ್ಲ.

ಬಳಲಿಕೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಬುಧವಾರ ವೈದ್ಯರ ಸೂಚನೆ ಮೇರೆಗೆ ಹಲವು ತಪಾಸಣೆಗೆ ಒಳಪಟ್ಟರು. ರಕ್ತದಲ್ಲಿ ಸೋಂಕು ಉಂಟಾಗಿರುವುದು ಪರೀಕ್ಷಾ ವರದಿಗಳಿಂದ ಗೊತ್ತಾಗಿದೆ. ಇದೇ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.

2009ರಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪರಿವೀಕ್ಷಣೆಗೆ ಹೋಗಿದ್ದಾಗ ಇದೇ ರೀತಿ ಅವರಿಗೆ ಸೋಂಕು ಉಂಟಾಗಿತ್ತು. ಸಾರ್ವಜನಿಕರು ಸಹಕರಿಸಬೇಕಾಗಿ ಎಚ್‌ಡಿಕೆ ಕುಟುಂಬ ಮನವಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು