ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್ ಮಾಡುತ್ತಿದ್ದ 7 ಮಂದಿ ಬಂಧನ

Last Updated 22 ನವೆಂಬರ್ 2019, 16:23 IST
ಅಕ್ಷರ ಗಾತ್ರ

ಬೆಳಗಾವಿ: ಯುವತಿಯ ಫೋಟೊ ತೋರಿಸಿ, ಆಕೆಯೊಂದಿಗೆ ಸಲುಗೆ ಬೆಳೆಸಲು ಅನುಕೂಲ ಮಾಡಿಕೊಟ್ಟು, ಏಕಾಂತದ ವಿಡಿಯೊ ಮಾಡಿ ‘ಹನಿಟ್ರ್ಯಾಪ್‌’ ಮೂಲಕ ದರೋಡೆ ಮಾಡುತ್ತಿದ್ದ ಗ್ಯಾಂಗ್‌ನಲ್ಲಿದ್ದ 7 ಮಂದಿ ಆರೋಪಿಗಳನ್ನು ಇಲ್ಲಿನ ಸಿಸಿಐಬಿ ಹಾಗೂ ಮಾರ್ಕೆಟ್‌ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಹಾದ್ವಾರ ರಸ್ತೆ 2ನೇ ಕ್ರಾಸ್‌ನ ವಿದ್ಯಾ ಅಲಿಯಾಸ್ ಸಾರಿಕಾ ಪಾಂಡುರಂಗ ಹವಾಲ್ದಾರ, ದೀಪಾ ಸಂದೀಪ ಪಾಟೀಲ, ಶಹಾಪುರ ಕೋರೆ ಗಲ್ಲಿಯ ಮಂಗಲಾ ದಿನೇಶ ಪಾಟೀಲ, ತಾಲ್ಲೂಕಿನ ಮನೋಹರ ಅಪ್ಪಾಸಾಬ ಪಾಯಕ್ಕನವರ, ಬಸವನಕುಡಚಿ ದೇವರಾಜ ಅರಸು ಕಾಲೊನಿಯ ನಾಗರಾಜ ರಾಮಚಂದ್ರ ಕಡಕೋಳ (ಕರವೇ ಜಿಲ್ಲಾ ಸಂಚಾಲಕ ಹಾಗೂ ‘ಜುಲ್ಮಸೇ ಜಂಗ’ ಪತ್ರಿಕೆ ವರದಿಗಾರ), ಸಹ್ಯಾದ್ರಿನಗರದ ಸಚಿನ್‌ ಮಾರುತಿ ಸುತಗಟ್ಟಿ, ಖಾನಾಪುರ ತಾಲ್ಲೂಕು ಇಟಗಿಯ ಮಹಮ್ಮದ್ ಯೂಸುಫ್ ಮೀರಾಸಾಬ ಕಿತ್ತೂರ ಬಂಧಿತರು.

ಇವರು ‘ಹನಿಟ್ರ್ಯಾಪ್‌’ ನಡೆಸಿ ₹ 50ಸಾವಿರಕ್ಕಾಗಿ ಪೀಡಿಸುತ್ತಾ ದರೋಡೆ ಮಾಡಿದ ಬಗ್ಗೆ ಮನೋಜ ಪಾಟೀಲ ಎನ್ನುವವರು ದೂರು ನೀಡಿದ್ದರು. ಇದನ್ನು ಆಧರಿಸಿ, ಸಿಸಿಐಬಿ ಇನ್‌ಸ್ಪೆಕ್ಟರ್‌ ಸಂಜೀವ ಕಾಂಬಳೆ ಹಾಗೂ ಮಾರ್ಕೆಟ್‌ ಠಾಣೆ ಇನ್‌ಸ್ಪೆಕ್ಟರ್‌ ಶಿವಯೋಗಿ ಮತ್ತು ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT