‘ಐಎಂಎ’ ಪ್ರಕರಣ ಸಿಬಿಐಗೆ ಒಪ್ಪಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿದ ಹೂಡಿಕೆದಾರ

ಸೋಮವಾರ, ಜೂನ್ 24, 2019
24 °C

‘ಐಎಂಎ’ ಪ್ರಕರಣ ಸಿಬಿಐಗೆ ಒಪ್ಪಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿದ ಹೂಡಿಕೆದಾರ

Published:
Updated:

ಬೆಂಗಳೂರು: ‘ಐಎಂಎ ಕಂಪನಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ  ಒಪ್ಪಿಸಬೇಕು’ ಎಂದು ಕೋರಿ ಹೂಡಿಕೆದಾರರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಚಿತ್ರದುರ್ಗ ನಗರದ ಮೊಹಮ್ಮದ್ ಸಿರಾಜುದ್ದೀನ್ ಈ ಅರ್ಜಿ ಸಲ್ಲಿಸಿದ್ದು ಶುಕ್ರವಾರ ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು.

* ಇದನ್ನೂ ಓದಿ: ‘ಐಎಂಎ’ ಸಾವಿರಾರು ಕೋಟಿ ವಂಚನೆ ಪ್ರಕರಣ | ಆಡಿಟರ್‌ ಎಸ್‌ಐಟಿ ವಶಕ್ಕೆ

ಇದೇ 17ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ  ತಿಳಿಸಿದೆ.

"ಐಎಂಎ ಸಂಸ್ಥೆಯಲ್ಲಿ ₹ 10 ಲಕ್ಷ ಹೂಡಿಕೆ ಮಾಡಿದ್ದೇನೆ. ಸಂಸ್ಥೆ ಮುಖ್ಯಸ್ಥ ಮನ್ಸೂರ್ ಅವರು, ಹಾಲಿ-ಮಾಜಿ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಆಪ್ತರಿದ್ದಾರೆ. ತುಂಬಾ ಪ್ರಭಾವಿ ಆಗಿರುವುದರಿಂದ ರಾಜ್ಯ  ಪೊಲೀಸರಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಅವರು ತಲೆ ಮರೆಸಿಕೊಂಡು ಒಂದು ವಾರ ಕಳೆದಿದ್ದರೂ ಪೊಲೀಸರು ಪತ್ತೆ ಮಾಡಿಲ್ಲ" ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

* ಇವನ್ನೂ ಓದಿ...

‘ಐಎಂಎ’; ₹ 1,230 ಕೋಟಿ ವಂಚನೆ ?

ಮನ್ಸೂರ್‌ ₹500 ಕೋಟಿ ಆಸ್ತಿ ಒಡೆಯ!

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !