ಭಾನುವಾರ, ಆಗಸ್ಟ್ 18, 2019
25 °C

ಮಧ್ಯಂತರ ಚುನಾವಣೆ ಸಂಭವ: ಯೋಗಾಭ್ಯಾಸದ ನಂತರ ದೇವೇಗೌಡ ಹೇಳಿಕೆ

Published:
Updated:

ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಂಭವ ಇದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಯೋಗಾಸನ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ಭವಿಷ್ಯ ಕಾಂಗ್ರೆಸ್ ನಾಯಕರ ಕೈಯಲ್ಲಿ ಇದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕುಂದಿದಂತಿದೆ. ಕಳೆದ ವರ್ಷ ಕುಮಾರಸ್ವಾಮಿ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಮಾಡಿದ್ದು ಅವರೇ. ಸಚಿವ ಸಂಪುಟದಲ್ಲಿ ಮೂರನೇ ಒಂದು ಪಾಲು ನಮಗೆ ಇಲ್ಲವಾದರೂ ನಾವು ಸಹಿಸಿಕೊಂಡು ಹೋಗುತ್ತಿದ್ದೇವೆ ಎಂದು ದೇವೇಗೌಡರು ಹೇಳಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಅವರಾಗಿಯೇ ನಮ್ಮ ಬಳಿಗೆ ಬಂದರು. ನೀವೇ ಸರ್ಕಾರ ರಚಿಸಿ ಎಂದರು. ಆದರೆ ಇಂದು ನಮ್ಮದೇ ತಪ್ಪೆಂದು ಹೇಳಿಕೆ ನೀಡುತ್ತಿದ್ದಾರೆ.  ಇದೆಲ್ಲವನ್ನು ನೋಡಿದರೆ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂದು ದೇವೇಗೌಡರು ಹೇಳಿದರು.

ಕಾಂಗ್ರೆಸ್ ಪ್ರತಿಕ್ರಿಯೆ | ‘ದೇವೇಗೌಡರು ದೊಡ್ಡವರು, ಯೋಚನೆ ಮಾಡಿ ಮಾತಾಡ್ತಾರೆ’

ಬಿಜೆಪಿ ಪ್ರತಿಕ್ರಿಯೆ | ‘ಯೋಗ್ಯತೆ ಇಲ್ಲದಿದ್ರೆ ಪಕ್ಕಕ್ಕೆ ಹೋಗ್ಲಿ, ನಾವು ಸರ್ಕಾರ ಮಾಡ್ತೀವಿ’

ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ: ‘ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ’

ಮಧ್ಯಂತರ ಚುನಾವಣೆ ಸಂಭವ: ಯೋಗಾಭ್ಯಾಸದ ನಂತರ ದೇವೇಗೌಡ ಹೇಳಿಕೆ


ಮನೆಯಲ್ಲಿ ದೇವೇಗೌಡರ ಯೋಗಾಭ್ಯಾಸ


ಮನೆಯಲ್ಲಿ ದೇವೇಗೌಡರ ಯೋಗಾಭ್ಯಾಸ

Post Comments (+)