ಶನಿವಾರ, ಜನವರಿ 18, 2020
19 °C

ತುಳು ಶಿವಳ್ಳಿ ಬ್ರಾಹ್ಮಣರ ವಿಶ್ವ ಸಮ್ಮೇಳನ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ (14 ರಂದು) ಬೆಳಿಗ್ಗೆ 10 ಕ್ಕೆ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ ನಡೆಯಲಿದೆ. 

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮಕ್ಕೂ ಮೊದಲು ಸಂಸ್ಕೃತ ಮಹಾ ಪಾಠ ಶಾಲೆಯಿಂದ ರಾಜಾಂಗಣದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11.30 ಕ್ಕೆ ಧಾರ್ಮಿಕ ಸಮಾವೇಶ, ಮಧ್ಯಾಹ್ನ 2 ಕ್ಕೆ ಉದ್ಯಮಶೀಲತಾ ಸಮಾವೇಶ ಬಳಿಕ ಸಾಂಸ್ಕೃತಿಕ, ಶೈಕ್ಷಣಿಕ ಸಮಾವೇಶಗಳು ನಡೆಯಲಿವೆ. ಸಂಜೆ 5 ಕ್ಕೆ ‘ತುಳು ಶಿವಳ್ಳಿ ಸಮಾಜ–ಅಂದು, ಇಂದು–ಮುಂದು’ ಕುರಿತು ವಿಚಾರಗೋಷ್ಠಿ ನಡೆಯಲಿದೆ.

ಡಿ.15ರಂದು ಬೆಳಿಗ್ಗೆ 9.30 ಕ್ಕೆ ಮಹಿಳಾ ಸಮಾವೇಶ ನಂತರ, ಯುವ ವಿಭಾಗದ ಸಮಾವೇಶ, ಧಾರ್ಮಿಕ ಚಿಂತನಾ ಗೋಷ್ಠಿ, ಸಾಧಕರ ಸಮಾವೇಶ ಜರುಗಲಿವೆ.

ಶುಕ್ರವಾರ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಪಲಿಮಾರು ವಿದ್ಯಾಧೀಶ ಶ್ರೀಗಳು ಚಾಲನೆ ನೀಡಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು