ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ, ಕಾಲ್ ಸೆಂಟರ್‌ ಆರಂಭ

Last Updated 4 ಮೇ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಕಂಟೈನ್‌ಮೆಂಟ್‌‌ ವಲಯ ಬಿಟ್ಟು ಉಳಿದೆಡೆ ಐಟಿ, ಐಟಿಎಸ್, ಕಾಲ್‌ ಸೆಂಟರ್‌, ಟೆಲಿ ಕಮ್ಯುನಿಕೇಷನ್‌, ಇಂಟರ್‌ನೆಟ್‌ ಸೇವೆ, ಇಂಕ್ಯುಬೇಟರ್‌ ಕೈಗಾರಿಕೆಗಳು ಚಟುವಟಿಕೆ ಆರಂಭಿಸಲು ಅನುಮತಿ ನೀಡಲಾಗಿದೆ.

ಆರಂಭಕ್ಕೂ ಮೊದಲು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ (ಡಿಐಸಿ) ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಸುತ್ತೋಲೆ ಹೊರಡಿಸಿದ್ದಾರೆ. ವೆಬ್‌ಸೈಟ್‌ನಲ್ಲಿ (www.kum.karnataka.gov.in) ‘ಕೋವಿಡ್‌ 19 ಸ್ವಯಂ ಘೋಷಣೆ’ಗೆ ಅವಕಾಶ ಕಲ್ಪಿಸಲಾಗಿದೆ.

ಕೆಂಪು ವಲಯದಲ್ಲಿ ಶೇ 33ರಷ್ಟು ನೌಕರರು ಮಾತ್ರ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ ಇದೆ. ಉಳಿದವರು ಮನೆಯಿಂದ ಕೆಲಸ ಮಾಡಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT