ಗುರುವಾರ , ನವೆಂಬರ್ 21, 2019
22 °C

‘ಜಾಲಗಾರ’ಕ್ಕೆ ಕಥಾ ಬಹುಮಾನ

Published:
Updated:
Prajavani

ಬೆಂಗಳೂರು: ಧಾರವಾಡದ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಯುವ ಕಥಾ ಸ್ಪರ್ಧೆಯಲ್ಲಿ ದಾದಾಪೀರ್ ಜೈಮನ್ ಅವರ ಕಥೆ ‘ಜಾಲಗಾರ’ ಬಹುಮಾನ ಪಡೆದಿದೆ.

‌ಒಪ್ಪಿತ ಕಥೆಗಳಾಗಿ ಅಮರೇಶ ಗಿಣಿವಾರ ಅವರ ‘ಹಿಂಡೆಕುಳ್ಳು’ ಮತ್ತು ಸಂಗನಗೌಡ ಹಿರೇಗೌಡ ಅವರ ‘ಗಾಯದ ಬೆನ್ನು’ ಆಯ್ಕೆಯಾಗಿವೆ. ಬಹುಮಾನಿತ ಕಥೆಗೆ ₹10 ಸಾವಿರ, ಒಪ್ಪಿತ ಎರಡೂ ಕಥೆಗಳಿಗೆ ತಲಾ ₹5 ಸಾವಿರ ನಗದು ಬಹುಮಾನವಿದೆ.

ಬಹುಮಾನಿತ ಕತೆಗಳು ‘ಸಂಗಾತ’ದ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ. ಹಿರಿಯ ಬರಹಗಾರರಾದ ಕೇಶವ ಮಳಗಿ ಹಾಗೂ ವಿನಯಾ ಒಕ್ಕುಂದ ಅವರು ತೀರ್ಪುಗಾರರಾಗಿದ್ದರು. 2020ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಸಂಗಾತ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)