ಸೋಮವಾರ, ಸೆಪ್ಟೆಂಬರ್ 23, 2019
24 °C

ಮುಖ್ಯಮಂತ್ರಿಯಾಗಿ... ಅಲ್ಲಲ್ಲ ಮಂತ್ರಿಯಾಗಿ ಪ್ರಮಾಣ ಮಾಡುತ್ತೇನೆ!

Published:
Updated:

ಬೆಂಗಳೂರು: ರಾಜಭವನದಲ್ಲಿ ಇಂದು ನಡೆದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ  ಹಾಸ್ಯ ಪ್ರಸಂಗವೊಂದು ನಡೆಯಿತು. ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ ಮಾಧುಸ್ವಾಮಿ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಎಡವಟ್ಟು ಮಾಡಿಕೊಂಡರು. 

ವೇದಿಕೆಗೆ ಬಂದ ಮಾಧುಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಾ ‘ನಾನು ರಾಜ್ಯದ ಮುಖ್ಯಮಂತ್ರಿಯಾಗಿ... ಅಲ್ಲಲ್ಲ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ,’ ಎಂದು ಹೇಳಿದ್ದು ಸಮಾರಂಭವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಸ್ವತಃ ಜೆ.ಸಿ ಮಾಧುಸ್ವಾಮಿ ಅವರೂ ಸಂಕೋಚಗೊಂಡರು. 

ಪಕ್ಕದಲ್ಲೇ ಗಂಭೀರವದನರಾಗಿ ನಿಂತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಒಂದು ಕ್ಷಣ ನಸುನಕ್ಕರು. 

Post Comments (+)