ಸೋಮವಾರ, ನವೆಂಬರ್ 18, 2019
29 °C
ಪರರಾಜ್ಯದವರಿಂದಲೂ ಶುಭಾಶಯ, ಜತೆಗೊಂದು ಟಾಂಗ್

ಟ್ವಿಟರ್ ತುಂಬಾ #KannadaRajyotsava #ಕನ್ನಡರಾಜ್ಯೋತ್ಸವ ಟ್ರೆಂಡ್

Published:
Updated:
ಕನ್ನಡ ರಾಜ್ಯೋತ್ಸವ

ಬೆಂಗಳೂರು: ನವೆಂಬರ್ 1 ಕರ್ನಾಟಕ ಉದಯಿಸಿದ ದಿನ. ಈ ಸಂಭ್ರಮವನ್ನು ಕನ್ನಡಿಗರು ಮಾತ್ರವೇ ಅಲ್ಲ, ಪರ ಭಾಷಿಕರು ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪರ ರಾಜ್ಯದವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಆತ್ಮೀಯ ಶುಭಾಶಯ ಕೋರಿದ್ದಾರೆ. ರಾಷ್ಟ್ರಪತಿ, ಪ್ರಧಾನಿ ಮಾತ್ರವೇ ಅಲ್ಲ, ಪಕ್ಕದ ಮಲಯಾಳಂ ರಾಜ್ಯದ ಕೇರಳ ಮುಖ್ಯಮಂತ್ರಿಯೂ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

ನಡುನಡುವೆ, ಕಿಡಿಗೇಡಿಗಳು ಕೂಡ ಈ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ನಲ್ಲಿ ಪ್ರತ್ಯೇಕತೆಯ ಧ್ವನಿ ಹೊರಡಿಸಿದ್ದಾರೆ. ಕನ್ನಡಿಗರಿಗೆ ಶುಭಾಶಯ, ಆದರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಕುಟಿಲ ಟ್ವೀಟ್‌ಗಳೂ ಕಿರು ಸಾಮಾಜಿಕ ಜಾಲ ತಾಣದಲ್ಲಿ ಶುಕ್ರವಾರ ಸದ್ದು ಮಾಡಿದೆ.

ಇದರೊಂದಿಗೆ, #KannadaRajyotsava ಹಾಗೂ #ಕನ್ನಡರಾಜ್ಯೋತ್ಸವ ಹ್ಯಾಶ್‌ಟ್ಯಾಗ್‌ಗಳು ದೇಶಾದ್ಯಂತ ಟ್ರೆಂಡ್ ಆದವು. ಅವುಗಳಲ್ಲಿ ನಮ್ಮ ರಾಜ್ಯದ ಹೆಮ್ಮೆಯನ್ನು ಬಿಂಬಿಸುವ ಸಾಕಷ್ಟು ಟ್ವೀಟ್‌ಗಳು ಸದ್ದು ಮಾಡಿವೆ.

ತಮಿಳು ನಟ ವಿಜಯ್ ಅಭಿಮಾನಿಗಳು ಕೂಡ, ತಲಪತಿ (ದಳಪತಿ) ವಿಜಯ್ ಕನ್ನಡದಲ್ಲಿ ಆಡಿದ ಮಾತಿನ ಕ್ಲಿಪ್ ಹಾಕಿ, ಶುಭಾಶಯ ಕೋರಿದ್ದಾರೆ.

ಬೆಂಗಳೂರು ತಮಿಳರು ಈ ದಿನವನ್ನು ಹೀಗೆ ಆಚರಿಸಿದರು.

ಕೆಲವರು ಬೇರೆಯವರನ್ನು ಛೇಡಿಸಲು ಈ ಹ್ಯಾಶ್ ಟ್ಯಾಗ್ ಬಳಸಿಕೊಂಡರು. ಅವುಗಳಲ್ಲೊಂದು ಇಲ್ಲಿದೆ. GoBackModi ಟ್ರೆಂಡ್ ಮಾಡಿದವರಿಗೆ ತಮಿಳುನಾಡು ದಿನವನ್ನು ಟ್ರೆಂಡ್ ಮಾಡಲಾಗಿಲ್ಲ ಎಂದು ಒಬ್ಬರು ರೋಷ ಕಾರಿದರು.

ಕನ್ನಡ ಸಹೋದರರಿಗೆ ಶುಭಾಶಯಗಳು. ಆದರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ಟ್ವೀಟ್‌ಗಳೂ ಸಾಕಷ್ಟು ಸದ್ದು ಮಾಡಿದವು.

ಟ್ರೆಂಡ್ ಆಗಿರುವುದನ್ನು ಕನ್ನಡಿಗರು ಸಂಭ್ರಮಿಸಿದರು.

ತಪ್ಪು ಉಚ್ಚರಿಸುವವರಿಗೆ ಎಚ್ಚರಿಕೆಯೂ ಕಂಡುಬಂತು.

ಪ್ರತಿಕ್ರಿಯಿಸಿ (+)