ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪಣ್ಣ ಅಂಗಳ ಫೇಸ್‌ಬುಕ್ ಪುಟದಲ್ಲಿ ಎಚ್.ಎನ್. ನೆನಪು

Last Updated 14 ಜೂನ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಅಂಗವಾಗಿ ಕಪ್ಪಣ್ಣ ಅಂಗಳ ಫೇಸ್‌ಬುಕ್‌ ಪುಟದಲ್ಲಿ ಎಚ್.ಎನ್. ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರ ರಾವ್ ಅವರು ಎಚ್.ಎನ್. ಅವರ ಜೀವನ ಕೃತಿಗಳ ಕುರಿತು ಮಾತನಾಡಿದರು. ಎಚ್.ಎನ್ ಅವರು ಕಟ್ಟಬಯಸಿದ್ದ ಸಮಾಜ, ಅದನ್ನು ರೂಪಿಸಲು ಪಟ್ಟ ಶ್ರಮ, ಒಲ್ಲದವರನ್ನು ಒಲಿಸುವ ಹೋರಾಟ ಹಾಗೂ ಅವರ ಮನದಾಳದ ಬಗ್ಗೆ ಮಾತನಾಡಿದರು.

ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್ ಅವರು ಎಚ್.ಎನ್ ಅವರ ಹೋರಾಟ, ರಾಜಕೀಯ ಜೀವನದ ಆದರ್ಶ ಮತ್ತು ಬದುಕಿನ ನಂಬಿಕೆಗಳ ಬಗ್ಗೆ ಮಾತನಾಡಿದರೆ, ಎಚ್‌.ಎನ್‌. ಅವರ ಜೀವನದ ಕೆಲವು ಘಟನೆಗಳ ಕುರಿತು ಕವಿ ಸಿದ್ಧಲಿಂಗಯ್ಯ ಮಾತನಾಡಿದರು.

ಘಂಟಸಾಲ ಗಾಯನದ ಹಾಡುಗಳಿಗೆ ಪ್ರಸಿದ್ಧರಾದ ಹಿರಿಯ ಕಲಾವಿದ ಶಶಿಧರ್ ಅವರು ಎಚ್.ಎನ್.ಅವರ ಪ್ರಿಯವಾದ ‘ಏಡು ಕುಂಡಲವಾಡ’ ಗೀತೆ ಹಾಡಿದರು. ಜನಪದ ಗಾಯಕ ಚಾಮರಾಜನಗರದ ನರಸಿಂಹಯ್ಯ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಡಿಯೊ ಸ್ಪರ್ಧೆಯ ಫಲಿತಾಂಶವನ್ನು ಲಲಿತಾ ಶ್ರೀನಿವಾಸ್ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT