ಶನಿವಾರ, ಜನವರಿ 25, 2020
22 °C
ಜೆಡಿಎಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನ

ಕುಮಾರಸ್ವಾಮಿ ಷಷ್ಟ್ಯಬ್ದಿಗೆ ಸಿದ್ಧತೆ: ಶಾಸಕರೊಂದಿಗೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ 60 ವರ್ಷ ತುಂಬಿದ ಪ್ರಯುಕ್ತ ಷಷ್ಟ್ಯಬ್ದಿ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಇದೇ ಹಿನ್ನೆಲೆಯಲ್ಲಿ ಶುಕ್ರವಾರ ಜೆ.ಪಿ.ನಗರದ ನಿವಾಸದಲ್ಲಿ ಶಾಸಕರ ಸಭೆ ಹಮ್ಮಿಕೊಂಡಿದ್ದಾರೆ.

ಸೋಲಿನಿಂದ ಕಂಗೆಟ್ಟು ಪಕ್ಷ ಪುನಶ್ಚೇತನಗೊಳ್ಳಲು ಎಂತಹ ಕ್ರಮ ಕೈಗೊಳ್ಳಬೇಕು ಎಂಬ ಸಮಾಲೋಚನೆಗಿಂತಲೂ, ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಈ ಸಭೆ ಮಹತ್ವ ನೀಡಲಿದೆ ಎಂದು ಹೇಳಲಾಗಿದೆ.

ಷಷ್ಟ್ಯಬ್ದ ಪೂಜೆ ಮೂಲಕ ಕಷ್ಟದಿಂದ ಪಾರಾಗಲು ಎಚ್‌ಡಿಕೆ ಮುಂದಾಗಿದ್ದು, ಇದೀಗ ಚುನಾವಣೆ ಸೋಲಿನ ಆಘಾತದಿಂದಲೂ ಅವರು ಸುಧಾರಿಸುತ್ತಿದ್ದಾರೆ. ಅನಾರೋಗ್ಯದಿಂದಲೂ ಬಹುತೇಕ ಚೇತರಿಸಿಕೊಳ್ಳುತ್ತಿದ್ದಾರೆ.

ಇದೇ 16ರಂದು ಕುಮಾರಸ್ವಾಮಿ ಅವರ ಜನ್ಮದಿನ ನಡೆಯಲಿದ್ದು, ಷಷ್ಟ್ಯಬ್ದ ಅದೇ ದಿನ ನಡೆಯಲಿದೆ. ಜ್ಯೋತಿಷಿಗಳ ಸಲಹೆ ಮೇರೆಗೆ ಶುಕ್ರವಾರದಿಂದಲೇ ಷಷ್ಟ್ಯಬ್ದ ಸಮಾರಂಭಕ್ಕೆ ಮೊದಲಾಗಿ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ಇದನ್ನೂ ಓದಿ... ರಾಮನಗರಕ್ಕೆ ಅನ್ಯಾಯ ಮಾಡಬೇಡಿ: ಎಚ್‌ಡಿಕೆ

ಪ್ರತಿಕ್ರಿಯಿಸಿ (+)