ಮಂಗಳವಾರ, ಜನವರಿ 21, 2020
28 °C
ಎಲ್ಲಾ ಕಮಿಷನರೇಟ್‌ಗಳಲ್ಲೂ ನಿಗ್ರಹ ದಳ ಸ್ಥಾಪನೆ: ಮುಖ್ಯಮಂತ್ರಿ ಬಿಎಸ್‌ವೈ ಭರವಸೆ

ಸೈಬರ್ ಅಪರಾಧಕ್ಕೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಎಲ್ಲ ಕಮಿಷ ನರೇಟ್‌ಗಳಲ್ಲಿ ಸೈಬರ್‌, ಆರ್ಥಿಕ ಅಪರಾಧ, ಮಾದಕ ದ್ರವ್ಯ ನಿಗ್ರಹ ಪೊಲೀಸ್‌ ಠಾಣೆಗಳು ಮತ್ತು ಭಯೋ ತ್ಪಾದನಾ ನಿಗ್ರಹ ದಳಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು ನಗರದ ಸೈಬರ್‌, ಆರ್ಥಿಕ ಅಪರಾಧಗಳು, ಮಾದಕ ದ್ರವ್ಯ ನಿಗ್ರಹ ಪೊಲೀಸ್‌ ಠಾಣೆಗಳು ಮತ್ತು ಭಯೋತ್ಪಾದನಾ ನಿಗ್ರಹ ದಳದ ಉದ್ಘಾಟನೆ ಮತ್ತು ಹೆದ್ದಾರಿ ಗಸ್ತು ವಾಹನಗಳ ಲೋಕಾರ್ಪಣೆ ಕಾರ್ಯ
ಕ್ರಮದಲ್ಲಿ ಈ ವಿಷಯ ತಿಳಿಸಿದರು.

‘ಸೈಬರ್‌, ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಸರಗಳ್ಳತನ, ಕೊಲೆ, ಅತ್ಯಾಚಾರ ಇತ್ಯಾದಿ ಪ್ರಕರಣಗಳು ಮರುಕಳಿಸದಂತೆ ಹೆಚ್ಚು ನಿಗಾವಹಿಸಿ ಕೆಲಸ ಮಾಡಬೇಕು. ಕಳ್ಳತನ ಮತ್ತು ಡಕಾಯಿತಿ ನಡೆಯುವ ಸೂಕ್ಷ್ಮ ಸ್ಥಳಗಳಲ್ಲಿ ಹೆದ್ದಾರಿ ವಾಹನಗಳಿಂದ ಗಸ್ತು ವ್ಯವಸ್ಥೆ ಮಾಡಬೇಕು’ ಎಂದು ಅವರು ಪೊಲೀಸರಿಗೆ ತಾಕೀತು ಮಾಡಿದರು.

ಸೈಬರ್‌ ಮತ್ತು ಆರ್ಥಿಕ ಅಪರಾಧದ ಪೊಲೀಸ್‌ ಠಾಣೆಗಳಿಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡ ಲಾಗಿದೆ. ಇದರಿಂದಾಗಿ ಅಪರಾಧ ನಿಯಂತ್ರಣ ಪ್ರಕ್ರಿಯೆ ಮತ್ತಷ್ಟು ಸುಧಾರಿ ಸಲಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲು ಹೆಚ್ಚಿನ ಸಹಾಯಕವಾಗಲಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್‌ ಹಾಗೂ ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ತರಬೇತಿ ಹೊಂದಿರುವ ಸಿಬ್ಬಂದಿಯ ಅಗತ್ಯವಿದೆ. ಇದಕ್ಕಾಗಿ ಸುಸಜ್ಜಿತ ಸೈಬರ್‌ ಅಪರಾಧಗಳ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ನಗರದಲ್ಲಿರುವ ಸಿಐಡಿ ಮುಖ್ಯ ಕಚೇರಿಯಲ್ಲಿ ಸ್ಥಾಪಿಸಲಾಗಿದೆ ಎಂದರು.

ಆರ್ಥಿಕ ಅಪರಾಧಗಳು ಹೆಚ್ಚಾಗು ತ್ತಿರುವ ಈ ಸಂದರ್ಭದಲ್ಲಿ ಜನರೂ ಎಚ್ಚರಿಕೆಯಿಂದ ತಮ್ಮ ಹಣವನ್ನು ತೊಡಗಿಸಬೇಕು. ಸಾರ್ವಜನಿಕರು ಸಂಚರಿಸುವ ರಸ್ತೆಗಳಲ್ಲಿ  ಮತ್ತು ಹೆದ್ದಾರಿ ಗಳಲ್ಲಿ ವ್ಹೀಲ್‌ ರೇಸಿಂಗ್‌ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಎಂಟು ಠಾಣೆಗಳ ಆರಂಭ: ಬೆಂಗಳೂರು ನಗರದಲ್ಲಿ ಎಂಟು ಕಡೆಗಳಲ್ಲಿ ಸೈಬರ್‌, ಆರ್ಥಿಕ ಅಪರಾಧ, ಮಾದಕ ದ್ರವ್ಯ ನಿಗ್ರಹ ಪೊಲೀಸ್‌ ಠಾಣೆಗಳನ್ನು ಆರಂಭಿ ಸಲಾಗಿದೆ. 10 ವರ್ಷ ಗ ಳಿಂದ ಒಂದೇ ಠಾಣೆ ಇತ್ತು. ಇನ್ನು ಮುಂದೆ ಇಂತಹ ಅಪರಾಧಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಬಹುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ರಸ್ತೆ ಅಪಘಾತ ಆದ 10ರಿಂದ 20 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ, ಗಾಯಾ ಳುಗಳನ್ನು ಆಸ್ಪತ್ರೆ ಸೇರಿಸುವ ವ್ಯವಸ್ಥೆಗಾಗಿ ಅಂಬುಲೆನ್ಸ್‌ ನಿಯೋಜಿಸಲಾಗಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಗಸ್ತು ವಾಹನವನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು

ಕರ್ನಾಟಕ ಅತ್ಯುತ್ತಮ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಪಾಲನೆ ಹೊಂದಿರುವ ರಾಜ್ಯ. ಅಪರಾಧ ಸಂಖ್ಯೆ ಕಡಿಮೆ ಮಾಡಿ, ಜನರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ
-ಬಿ.ಎಸ್.ಯಡಿಯೂರಪ್ಪ,ಮುಖ್ಯಮಂತ್ರಿ

****

ದೌರ್ಜನ್ಯ ಕಂಡರೆ ತಕ್ಷಣ ಸ್ಪಂದಿಸಿ

ಹೆದ್ದಾರಿಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ತಕ್ಷಣವೇ ಸ್ಪಂದಿಸಬೇಕು.  ಸಹಾಯವಾಣಿ ಸಂಖ್ಯೆಗಳಾದ 100, 108 ಮತ್ತು 112 ಮೂಲಕ ಪೊಲೀಸರ ಗಮನಕ್ಕೆ ಕೂಡಲೇ ತರಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ಹೆದ್ದಾರಿ ಗಸ್ತು ವಾಹನ ಗಳು ಕರೆ ಸ್ವೀಕರಿಸಿದ 60 ಸೆಕೆಂಡು ಗಳಲ್ಲಿ ಸ್ಥಳಕ್ಕೆ ಕಳುಹಿಸಲು ಕ್ರಮವಹಿಸಬೇಕು. ಅಪಘಾತ ನಡೆದ ಸ್ಥಳಕ್ಕೆ 20 ನಿಮಿಷಗಳಲ್ಲಿ ಹೆದ್ದಾರಿ ಗಸ್ತು ವಾಹನವು ಧಾವಿಸಿ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು