ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರುವಲಯದ ಜಿಲ್ಲೆಗಳಲ್ಲಿ ಇದೇ 7ರಿಂದ ಡಿಎಲ್, ಎಲ್‌ಎಲ್‌ ಪರೀಕ್ಷೆ

ಪ್ರತಿ ದಿನ ಶೇ 50 ಮಂದಿಗೆ ಮಾತ್ರ ಡಿಎಲ್ ಪರೀಕ್ಷೆ
Last Updated 5 ಮೇ 2020, 14:04 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಹಸಿರು ವಲಯದ 14 ಜಿಲ್ಲೆಗಳಲ್ಲಿ ಇದೇ 7ರಿಂದ ಚಾಲನಾ ಪರವಾನಗಿ (ಡಿ.ಎಲ್) ಹಾಗೂ ಕಲಿಕಾ ಪರವಾನಗಿ (ಎಲ್.ಎಲ್) ಪರೀಕ್ಷೆಗಳು ನಡೆಯಲಿದ್ದು, ಪ್ರತಿದಿನ ಶೇ 50 ಮಂದಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಪರೀಕ್ಷೆ ನಡೆಯುವ ದಿನಾಂಕ ಹಾಗೂ ವಿವರಗಳನ್ನು ಆಭ್ಯರ್ಥಿಗಳ ಮೊಬೈಲ್‍ಗೆ ರವಾನಿಸಲಾಗಿದೆ. ಆನ್‍ಲೈನ್‌ನಲ್ಲಿ ಈಗಾಗಲೇ ನೋಂದಾಯಿಸಿ, ಪರೀಕ್ಷೆಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ. ಸಾರಿಗೆ ಕಚೇರಿಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆಯಂತಹ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೇವೆ ಪಡೆಯಬಹುದು.

ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿನ ಸಾರಿಗೆ ಕಚೇರಿಗಳಲ್ಲಿ ವಾಹನ್-4 ತಂತ್ರಾಂಶದಡಿ ವಾಹನಗಳ ನೋಂದಣಿ, ವಾಹನದ ವರ್ಗಾವಣೆ, ಅರ್ಹತಾಪತ್ರ ನವೀಕರಣಗಳು ನಡೆಯುತ್ತಿವೆ. ಈ ವಲಯಗಳಲ್ಲಿ ಪರವಾನಗಿ ಸಂಬಂಧಿಸಿದ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT