ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಪರಿಹಾರ ಬದಲು ನಷ್ಟ ಭರಿಸಲು ಕೋರಿಕೆ: ₹38 ಸಾವಿರ ಕೋಟಿಗೆ ಮನವಿ!

ಪ್ರವಾಹ ಪರಿಹಾರದ ಬದಲು ನಷ್ಟ ಭರಿಸಲು ಕೋರಿಕೆ ಪತ್ರ ಸಿದ್ಧ
Last Updated 30 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಉಂಟಾಗಿರುವ ನಷ್ಟದ ಪ್ರಮಾಣವನ್ನು ನಿಖರವಾಗಿ ಅಂದಾಜು ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದರೂ, ₹38,000 ಕೋಟಿ ನಷ್ಟ ಭರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ₹40 ಸಾವಿರ ಕೋಟಿಯಿಂದ ₹45 ಸಾವಿರ ಕೋಟಿ ನಷ್ಟ ಆಗಿರಬಹುದು ಎಂದು ಈಗಾಗಲೇ ತಿಳಿಸಿದ್ದಾರೆ. ನಷ್ಟದ ಪ್ರಮಾಣ ಎಷ್ಟು, ಕೇಂದ್ರದಿಂದ ಎಷ್ಟು ಮೊತ್ತ ಕೇಳಬೇಕು ಎಂಬ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, ಭಾರಿ ಮೊತ್ತಕ್ಕೆ ಬೇಡಿಕೆ ಸಲ್ಲಿಸಲು ಕೆಲವು ಸಚಿವರು ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಆದ್ದರಿಂದ ಈ ಬಾರಿ ಪರಿಹಾರ (compensation) ಕೇಳುವುದಕ್ಕೆ ಬದಲು, ರಾಜ್ಯದಲ್ಲಿ ಉಂಟಾಗಿರುವ ನಷ್ಟದ(loss) ಮೌಲ್ಯವನ್ನು ವಿವರಿಸಿ, ಅಷ್ಟು ಹಣ ಕೇಳಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

₹38,000 ಕೋಟಿ ನಷ್ಟ ಆಗಿದ್ದು, ಅದನ್ನು ಭರಿಸಿಕೊಡುವಂತೆ ಕೇಂದ್ರಕ್ಕೆ ಮನವಿ ಪತ್ರವೊಂದನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಸೆಪ್ಟಂಬರ್‌ 7 ರಂದು ಪ್ರಧಾನಿ ಮೋದಿ ನಗರಕ್ಕೆ ಭೇಟಿ ನೀಡಿದಾಗ ಆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೇಳಿದಷ್ಟು ಪರಿಹಾರ ಸಿಗದು: ‘ಕೇಂದ್ರ ಸರ್ಕಾರಕ್ಕೆನಾವು ಮನವಿ ಸಲ್ಲಿಸಿದಷ್ಟು ಮೊತ್ತವನ್ನು ಬಿಡುಗಡೆ ಮಾಡುವುದಿಲ್ಲ. ರಾಷ್ಟ್ರೀಯ ದುರಂತ ನಿರ್ವಹಣಾ ಪ್ರಾಧಿಕಾರದ ನಿಯಮಾವಳಿ ಪ್ರಕಾರವೇ ಪ್ರತಿಯೊಂದು ನಷ್ಟಕ್ಕೂ ಮೊತ್ತ ಬಿಡುಗಡೆ ಮಾಡಲಾಗುತ್ತದೆ. ಆ ಪ್ರಕಾರವೇ ‘ರಿಲೀಫ್’ ಮೊತ್ತ ನೀಡುತ್ತದೆ. ನಿಯಮಾವಳಿಪ್ರಕಾರ ಅಂದಾಜು ಮಾಡಿದರೂ ಕೇಂದ್ರದಿಂದ ₹4,000 ಕೋಟಿಗಿಂತಲೂ ಕಡಿಮೆ ಮೊತ್ತ ಸಿಗಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ ರಸ್ತೆ, ಸೇತುವೆಗಳು, ಇತರ ಮೂಲಭೂತ ಸೌಕರ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ. ಸುಮಾರು 2.80 ಲಕ್ಷ ಮನೆಗಳಿಗೆ ಹಾನಿಯಾಗಿದೆ. 7 ರಿಂದ 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ನಷ್ಟವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಪರಿಹಾರ ನಿಯಮಾವಳಿ ನಿಗದಿ ಮಾಡಿರುವ ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ವಿತರಿಸುವ ಕಾರ್ಯ ನಡೆದಿದೆ. 2 ಲಕ್ಷ ಜನರಿಗೆ ತಕ್ಷಣದ ಪರಿಹಾರವಾಗಿ ತಲಾ ₹10 ಸಾವಿರ ನೀಡಲಾಗಿದೆ. ಅಲ್ಲದೆ, ಮನೆಗಳನ್ನು ಕಟ್ಟಿಕೊಳ್ಳಲು ತಲಾ ₹5 ಲಕ್ಷ ನೀಡುವುದಾಗಿ ಪ್ರಕಟಿಸಲಾಗಿದೆ. ಮನೆ ನಿರ್ಮಾಣಕ್ಕೇ ₹10 ಸಾವಿರ ಕೋಟಿ ಬೇಕಾಗಬಹುದು. ಇದನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಕಾದು ನೋಡಬೇಕು ಎಂದರು.

‘ಮಹಾರಾಷ್ಟ್ರದಲ್ಲಿ ಸಾಕಷ್ಟು ಹಾನಿಯಾಗಿದೆ. ಅಲ್ಲಿನ ಸರ್ಕಾರ ₹1600 ಕೋಟಿ ಪರಿಹಾರ ಕೇಳಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಪ್ರವಾಹದ ಹಾವಳಿಯಿಂದ ಸಾಕಷ್ಟು ನಷ್ಟ ಆಗಿರುವುದರಿಂದ ನಾವು ಬಹಳ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

ಭೇಟಿ ನೀಡದ ಮೋದಿ; ಟೀಕೆ

ರಾಜ್ಯದ ಜಿಲ್ಲೆಗಳ 103 ತಾಲ್ಲೂಕುಗಳು ಪ್ರವಾಹ ಪೀಡಿತವಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದರೂ ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಬಂದು ಪರಿಶೀಲನೆ ಮಾಡದಿರುವ ಬಗ್ಗೆ ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ.

20009 ರಲ್ಲಿ ರಾಜ್ಯದ ಉತ್ತರಕರ್ನಾಟಕದಲ್ಲಿ ಪ್ರವಾಹ ಬಂದಾಗ, ಅಂದಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಪ್ರವಾಹಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು ಮತ್ತು ಸ್ಥಳದಲ್ಲೇ ₹1600 ಕೋಟಿ ಪರಿಹಾರ ಪ್ರಕಟಿಸಿದ್ದರು ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.‌

ಕಾಂಗ್ರೆಸ್‌ ಕೇಂದ್ರದ ಮೇಲೆ ವೃಥಾ ಟೀಕೆ ಮಾಡುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಗೃಹ ಸಚಿವ ಅಮಿತ್‌ ಶಾ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಬಂದು ಹೋಗಿದ್ದಾರೆ. ಆ ಬಳಿಕ ನಷ್ಟದ ಅಂದಾಜು ಮಾಡಲು ಕೇಂದ್ರದ ತಂಡ ಬಂದು ಹೋಗಿದೆ. ಪರಿಹಾರ ಮೊತ್ತ ಸದ್ಯವೇ ಪ್ರಕಟವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಕೇಳಿದಷ್ಟು ಪರಿಹಾರ ಸಿಗದು: ‘ಕೇಂದ್ರ ಸರ್ಕಾರಕ್ಕೆನಾವು ಮನವಿ ಸಲ್ಲಿಸಿದಷ್ಟು ಮೊತ್ತವನ್ನು ಬಿಡುಗಡೆ ಮಾಡುವುದಿಲ್ಲ. ರಾಷ್ಟ್ರೀಯ ದುರಂತ ನಿರ್ವಹಣಾ ಪ್ರಾಧಿಕಾರದ ನಿಯಮಾವಳಿ ಪ್ರಕಾರವೇ ಪ್ರತಿಯೊಂದು ನಷ್ಟಕ್ಕೂ ಮೊತ್ತ ಬಿಡುಗಡೆ ಮಾಡಲಾಗುತ್ತದೆ. ಆ ಪ್ರಕಾರವೇ ‘ರಿಲೀಫ್’ ಮೊತ್ತ ನೀಡುತ್ತದೆ. ನಿಯಮಾವಳಿಪ್ರಕಾರ ಅಂದಾಜು ಮಾಡಿದರೂ ಕೇಂದ್ರದಿಂದ ₹4,000 ಕೋಟಿಗಿಂತಲೂ ಕಡಿಮೆ ಮೊತ್ತ ಸಿಗಬಹುದು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ ರಸ್ತೆ, ಸೇತುವೆಗಳು, ಇತರ ಮೂಲಭೂತ ಸೌಕರ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ. ಸುಮಾರು 2.80 ಲಕ್ಷ ಮನೆಗಳಿಗೆ ಹಾನಿಯಾಗಿದೆ. 7 ರಿಂದ 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ನಷ್ಟವಾಗಿದೆ ಎಂದು ಹೇಳಿದರು.

ಈಗಾಗಲೇ ಪರಿಹಾರ ನಿಯಮಾವಳಿ ನಿಗದಿ ಮಾಡಿರುವ ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ವಿತರಿಸುವ ಕಾರ್ಯ ನಡೆದಿದೆ. 2 ಲಕ್ಷ ಜನರಿಗೆ ತಕ್ಷಣದ ಪರಿಹಾರವಾಗಿ ತಲಾ ₹10 ಸಾವಿರ ನೀಡಲಾಗಿದೆ. ಅಲ್ಲದೆ, ಮನೆಗಳನ್ನು ಕಟ್ಟಿಕೊಳ್ಳಲು ತಲಾ ₹5 ಲಕ್ಷ ನೀಡುವುದಾಗಿ ಪ್ರಕಟಿಸಲಾಗಿದೆ. ಮನೆ ನಿರ್ಮಾಣಕ್ಕೇ ₹10 ಸಾವಿರ ಕೋಟಿ ಬೇಕಾಗಬಹುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT