ಬುಧವಾರ, ಜನವರಿ 29, 2020
27 °C

ಮತ್ತೆ ಗಡಿ ತಂಟೆ: ತಕ್ಷಣ ಸಭೆಗೆ ಎಚ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ಮತ್ತೆ ಗಡಿ ತಂಟೆ ಆರಂಭಿಸಿದ್ದು, ರಾಜ್ಯ ಸರ್ಕಾರ ತಕ್ಷಣ ಈ ಹಿಂದೆ ಗಡಿ ವಿವಾದದ ಕುರಿತು ಸೇವೆ ಸಲ್ಲಿಸಿದವರ ಸಭೆ ಕರೆಯಬೇಕು ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ತಾನು ದಾಖಲಿಸಿದ ಮೂಲ ದಾವೆಯನ್ನು ಮುಂದುವರಿಸಿಕೊಂಡು ಹೋಗಲು ಇಬ್ಬರು ಸಚಿವರ ಸಮಿತಿ ರಚಿಸಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಹೇಳಿದ್ದಾರೆ.

ಗಡಿ ವಿಚಾರದಲ್ಲಿ ಸದ್ಯ ರಾಜ್ಯಕ್ಕೆ ಎಲ್ಲ ಕಾನೂನು ಬಲವೂ ಇದೆ. ಸುಪ್ರೀಂ ಕೋರ್ಟ್‌ ಸಹ ರಾಜ್ಯದ ವಾದವನ್ನು ಪುರಸ್ಕರಿಸಿದೆ. ಆದರೂ ಮಹಾರಾಷ್ಟ್ರದ ನೂತನ ಸರ್ಕಾರದ ಗಡಿ ತಂಟೆಯನ್ನು ಗಮನಿಸಿ, ಅಗತ್ಯವಾದ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು