ಮಂಗಳವಾರ, ಮೇ 26, 2020
27 °C
ಸಾಮಾಜಿಕ ಮಾಧ್ಯಮ

‘ಮೂರು ಕೊಟ್ರೆ ಪಾರ್ಟಿ ಕಡೆ; ಆರು ಕೊಟ್ರೆ ರೆಸಾರ್ಟ್ ಕಡೆ‘ – ಹೊಸ ಗಾದೆಗಳ ಹುಟ್ಟು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾರದಿಂದ ರಾಷ್ಟ್ರಮಟ್ಟದ ಗಮನ ಸೆಳೆದಿರುವ ರಾಜ್ಯ ರಾಜಕೀಯ ಜನರಲ್ಲಿ ಹೊಸ ಆಡು ಮಾತುಗಳನ್ನು ಹುಟ್ಟು ಹಾಕಿದೆ. ರಾಜಕೀಯ ಪ್ರಹಸನದ ತಿಕ್ಕಾಟದಲ್ಲಿ ಮೇಲೆದ್ದಿರುವ ನವಗಾದೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

‘ಮೂರು ಕೊಟ್ರೆ ಪಾರ್ಟಿ ಕಡೆ; ಆರು ಕೊಟ್ರೆ ರೆಸಾರ್ಟ್ ಕಡೆ, ಕೂತು ಕಲಾಪ ನೋಡೋವ್ನಿಗೆ 2 ಜಿಬಿ ಡೇಟಾ ಸಾಲದು,..‘ ಇಂಥ ಸಾಲುಗಳ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಕೆಲವು ದಿನಗಳಿಂದ ನಡೆದ ಬೆಳವಣಿಗೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಂಬಿಸಲಾಗುತ್ತಿದೆ. 

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಸದನ ಸ್ವಾರಸ್ಯ| ಸೌಧದಲ್ಲಿ ವಿಲವಿಲ, ಮೀಮ್‌ಗಳಲ್ಲಿ ಕಿಲಕಿಲ

ಬಿಜೆಪಿ ತಾಳ್ಮೆ, ಮುಂಬೈ ಬಿಟ್ಟು ಬರದ ಅತೃಪ್ತ ಶಾಸಕರು, ಕಾಂಗ್ರೆಸ್‌–ಜೆಡಿಎಸ್‌ ಮುಖಂಡರು ಸರ್ಕಾರ ಉಳಿಸಲು ನಡೆಸಿದ ಯತ್ನ, ಸ್ಪೀಕರ್‌ ಮಾತು, ರಾಜ್ಯಪಾಲರ ಮಧ್ಯ ಪ್ರವೇಶ,...ಹೀಗೆ ಎಲ್ಲಕ್ಕೂ ವ್ಯಂಗ್ಯದ ಲೇಪ ಹಚ್ಚಿ ಹರಿಯಬಿಡಲಾಗಿದೆ. 

ಕೆಲವರು ಹಳೆಯ ಗಾದೆಗಳಿಗೆ ಇಂದಿನ ಪರ್ಯಾಯ ಸಾಲುಗಳನ್ನೂ ನಮೂದಿಸಿದ್ದಾರೆ. 

ಇದನ್ನೂ ಓದಿ: ರಾಜ್ಯ ರಾಜಕಾರಣ | ವ್ಯಂಗ್ಯಚಿತ್ರಗಳಲ್ಲಿ ಕಂಡ ಕಲಾಪ ಪ್ರಸಂಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು