ಭಾನುವಾರ, ಏಪ್ರಿಲ್ 5, 2020
19 °C

ಪ್ರಜಾವಾಣಿ ಮುಖಪುಟ ವಿನ್ಯಾಸಕ್ಕೆ ‘ಆರ್. ಶಾಮಣ್ಣ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ‘ಪ್ರಜಾವಾಣಿ’ಯ ಮುಖಪುಟ ವಿನ್ಯಾಸಕ್ಕೆ ‘ಆರ್. ಶಾಮಣ್ಣ ಪ್ರಶಸ್ತಿ’ ಲಭಿಸಿದೆ.

ಇದೇ 7 ಮತ್ತು 8ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

‌ಜೀವಮಾನದ ಸಾಧನೆಗೆ ನೀಡುವ ಪ್ರಶಸ್ತಿ: ಪದ್ಮರಾಜ ದಂಡಾವತಿ, ಹಿರಿಯ ಪತ್ರಕರ್ತರು (ಗೊಮ್ಮಟ ಮಾಧ್ಯಮ ಪ್ರಶಸ್ತಿ), ಮನೋಹರ್‌ ಪ್ರಸಾದ್, ಉದಯವಾಣಿ(ಡಿವಿಜಿ ಪ್ರಶಸ್ತಿ), ತಿಮ್ಮಪ್ಪ ಭಟ್ (ಪಾಟೀಲ ಪುಟ್ಟಪ್ಪ ಪ್ರಶಸ್ತಿ), ಪೆ.ನಾ. ಗೋಪಾಲರಾವ್‌, ಹಿರಿಯ ಪತ್ರಕರ್ತರು (ಎಸ್‌.ವಿ. ಜಯಶೀಲರಾವ್ ಪ್ರಶಸ್ತಿ), ಅಬ್ಬೂರು ರಾಜಶೇಖರ್‌, ಹಿರಿಯ ಪತ್ರಕರ್ತರು(ಎಚ್‌.ಕೆ. ವೀರಣ್ಣಗೌಡ ಪ್ರಶಸ್ತಿ), ಮಹೇಶ ಅಂಗಡಿ, ಸಂಜೆದರ್ಶನ, ಬಾಗಲಕೋಟೆ, (ಗರುಡನಗಿರಿ ನಾಗರಾಜ್ ಪ್ರಶಸ್ತಿ), ಜಿ.ಎನ್‌. ಮೋಹನ್‌, ಹಿರಿಯ ಪತ್ರಕರ್ತರು (ಎಂ.ಎಂ. ಕಲಬುರ್ಗಿ ಪ್ರಶಸ್ತಿ), ಸಿ.ರುದ್ರಪ್ಪ, ಹಿರಿಯ ಪತ್ರಕರ್ತರು(ಎಂ. ನಾಗೇಂದ್ರರಾವ್ ಪ್ರಶಸ್ತಿ), ಗುಂಡೂರಾವ್‌, ಶಿವಮೊಗ್ಗ(ಮಿಂಚು ಶ್ರೀನಿವಾಸ್‌ ಪ್ರಶಸ್ತಿ), ಆನಂದ್ ಶೆಟ್ಟಿ, ಹೊಸದಿಗಂತ(ಪಿ.ಆರ್. ರಾಮಯ್ಯ ಪ್ರಶಸ್ತಿ), ವಿದ್ಯಾ ಕೊಡ್ಲಿಕೆರೆ, ಸಂಯುಕ್ತ ಕರ್ನಾಟಕ(ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ). ಸೂರ್ಯನಾರಾಯಣ ಎಂ ನರಗುಂದಕರ್,ಸಂಯುಕ್ತ ಕರ್ನಾಟಕ (ಬದರೀನಾಥ ಹೊಂಬಾಳೆ ಪ್ರಶಸ್ತಿ). ಎಸ್‌.ಬಿ. ಮಠದ, ಸರ್ವಜ್ಞ ವಾರಪತ್ರಿಕೆ, ಶಿಕಾರಿಪುರ (ಕಿಡಿಶೇಷಪ್ಪ ಪ್ರಶಸ್ತಿ), ಮುರುಳೀಧರ ಖಜಾನೆ, ಹಿರಿಯ ಪತ್ರಕರ್ತರು(ಅಪ್ಪಾಜಿಗೌಡ ಪ್ರಶಸ್ತಿ), ಕೋ.ನಾ.ಪ್ರಭಾಕರ್‌, ಕನ್ನಡಮಿತ್ರ, ಕೋಲಾರ (ಮ.ರಾಮಮೂರ್ತಿ ಪ್ರಶಸ್ತಿ), ಭೀಮಣ್ಣ ಗಜಾಪುರ, ಕನ್ನಡಪ್ರಭ, ಕೂಡ್ಲಿಗಿ (ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ), ಬಿ.ಎಂ. ಸತೀಶ್ ಕುಮಾರ್‌, ದ ಹಿಂದು(ಕೆ.ಎನ್. ಸುಬ್ರಹ್ಮಣ್ಯ ಪ್ರಶಸ್ತಿ), ಭೀಮಶೇನರಾವ್ ವಜ್ಜಲ್‌,  ಪ್ರಜಾವಾಣಿ, ಹುಣಸಗಿ, ಯಾದಗಿರಿ(ಎಚ್‌.ಎಸ್‌. ದೊರೆಸ್ವಾಮಿ ಪ್ರಶಸ್ತಿ).

ವಿಶೇಷ ಪ್ರಶಸ್ತಿ: ಎಂ.ಆರ್. ಸುರೇಶ್‌, ದಿಗ್ವಿಜಯ್‌ ಟಿ.ವಿ. ಹಾಗೂ ಸಿದ್ಧಪ್ಪ ಅರಕೆರೆ, ಲಂಕೇಶ್ ಪತ್ರಿಕೆ, ಬೆಂಗಳೂರು.

ಅತ್ಯುತ್ತಮ ವರದಿಗೆ ಪ್ರಶಸ್ತಿ: ಶ್ರೀಕಾಂತ ಶೇಷಾದ್ರಿ, ವಿಜಯವಾಣಿ (ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ– ಕ್ರಿಯಾಶೀಲ ವರದಿ). ಅರುಣ್‌ ಕುಮಾರ್‌, ಉದಯವಾಣಿ, ಬೈಂದೂರು ಹಾಗೂ ರವಿಕುಮಾರ್ ಸಿ.ಎಸ್‌. ಕೋಲಾರವಾಣಿ, ಚಿಂತಾಮಣಿ(ಜಿ. ನಾರಾಯಣಸ್ವಾಮಿ ಪ್ರಶಸ್ತಿ, ಅತ್ಯುತ್ತಮ ಗ್ರಾಮಾಂತರ ವರದಿ). ಸಿರಾಜ್ ಅಹಮದ್‌, ವಿಜಯಕರ್ನಾಟಕ, ಮಧುಗಿರಿ ಹಾಗೂ ಕೆ.ಸತ್ಯನಾರಾಯಣ, ಸಂಜೆವಾಣಿ, ರಾಯಚೂರು(ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ, ಅತ್ಯುತ್ತಮ ಮಾನವೀಯ ವರದಿ), ಲಕ್ಷೀಸಾಗರ ಸ್ವಾಮಿಗೌಡ, ಹಾಯ್ ಬೆಂಗಳೂರು ಹಾಗೂ ದವಡಬೆಟ್ಟ ನಾಗರಾಜ್, ಸಂಜೆಮುಗಿಲು, ಪಾವಗಡ(ಗಿರಿಧರ್ ಪ್ರಶಸ್ತಿ, ಅತ್ಯುತ್ತಮ ಅಪರಾಧ ವರದಿ). ರಾಜೇಶ ರೈ ಚಟ್ಲ, ಪ್ರಜಾವಾಣಿ, ಬೆಂಗಳೂರು ಹಾಗೂ ಮಹಮದ್ ಇಮ್ತಿಯಾಜ್, ವಾರ್ತಾಭಾರತಿ, ಮಂಗಳೂರು (ಬಿ.ಎಸ್. ವೆಂಕಟರಾಂ ಪ್ರಶಸ್ತಿ, ಅತ್ಯುತ್ತಮ ಸ್ಕೂಪ್‌ ವರದಿ), ಜಗದೀಶ್‌ ಚಂದ್ರ ಅಂಚನ್‌, ಮಂಗಳೂರು(ಕೆ.ಎ. ನೆಟ್ಟಕಲ್ಲಪ್ಪ ಪ್ರಶಸ್ತಿ, ಅತ್ಯುತ್ತಮ ಕ್ರೀಡಾವರದಿ). ಎಸ್‌. ಲಕ್ಷ್ಮೀನಾರಾಯಣ, ಉದಯವಾಣಿ, ಬೆಂಗಳೂರು(ಖಾದ್ರಿ ಶಾಮಣ್ಣ ಪ್ರಶಸ್ತಿ, ಅತ್ಯುತ್ತಮ ಸುದ್ದಿ ವಿಮರ್ಶೆ). ಚಂದ್ರಹಾಸ್‌ ಚಾರ್ಮಾಡಿ, ಧರ್ಮಸ್ಥಳ ಮತ್ತು ಡಿ.ಜಿ. ಮಲ್ಲಿಕಾರ್ಜುನ, ಪ್ರಜಾವಾಣಿ, ಶಿಡ್ಲಘಟ್ಟ(ಮಂಗಳಾ ಎಂ.ಸಿ. ವರ್ಗೀಸ್‌ ಪ್ರಶಸ್ತಿ), ಉದಯಶಂಕರ್‌, ದ ಇಂಡಿಯನ್ ಎಕ್ಸ್‌ಪ್ರೆಸ್‌, ಮೈಸೂರು(ಬಂಡಾಪುರ ಮುನಿರಾಜು ಪ್ರಶಸ್ತಿ, ಅತ್ಯುತ್ತಮ ಸುದ್ದಿ ಛಾಯಾಚಿತ್ರ), ಅರುಣ್ ರಕ್ಷಿದಿ, ವಿಜಯಕರ್ನಾಟಕ, ಸಕಲೇಶಪುರ (ಆರ್.ಎಲ್. ವಾಸುದೇವರಾವ್ ಪ್ರಶಸ್ತಿ, ಅರಣ್ಯ ಕುರಿತ ಲೇಖನ).

ಪತ್ತರೀರ ಕರುಣ್ ಕಾಳಯ್ಯ, ಕನ್ನಡಪ್ರಭ, ಕೊಡಗು(ಆರ್.ಎಲ್. ವಾಸುದೇವರಾವ್ ಪ್ರಶಸ್ತಿ, ವನ್ಯಪ್ರಾಣಿ ಕುರಿತ ಲೇಖನ), ವೆಂಕಟೇಶ್ ಆರ್‌, ಜನತಾ ಮಾಧ್ಯಮ, ಹಾಸನ ಹಾಗೂ ಯಳನಾಡು ಮಂಜು, ವಿಜಯಕರ್ನಾಟಕ, ದಾವಣಗೆರೆ (ಬಿ.ಜಿ. ತಿಮ್ಮಪ್ಪಯ್ಯ ಪ್ರಶಸ್ತಿ, ದುರ್ಬಲ ವರ್ಗದವರ ಪರಿಸ್ಥಿತಿ ಕುರಿತ ವರದಿ). ಶಶಿಕಾಂತ್ ಮಂಡೇಗಾರ, ವಿಜಯವಾಣಿ, ವಿಜಯಪುರ ಮತ್ತು ಆನಂದ್ ಅರಸೀಕೆರೆ, ಈ ಸಂಜೆ, ಹಾಸನ(ಮಂಡಿಬೆಲೆ ಶಾಮಣ್ಣ ಪ್ರಶಸ್ತಿ)

ಬದ್ರುದ್ದೀನ್ ಕೆ ಮಾಣಿ, ಪಬ್ಲಿಕ್ ಟಿ.ವಿ, ಬೆಂಗಳೂರು ಹಾಗೂ ಕೆ.ಎಂ. ಪಂಕಜ, ವಿಜಯವಾಣಿ, ಬೆಂಗಳೂರು(ನಾಡಪ್ರಭು ಕೆಂಪೇಗೌಡ ಪ್ರಶಸ್ತಿ). ಸಂಧ್ಯಾ ಹೆಗಡೆ, ಪ್ರಜಾವಾಣಿ, ಶಿರಸಿ ಹಾಗೂ ಮಲ್ಲಿಕಾರ್ಜುನ ರೆಡ್ಡಿ ಬಿ ಗೋಂದಿ, ವಿಜಯಕರ್ನಾಟಕ, ರಾಮದುರ್ಗ (ಯಜಮಾನ್‌ ಟಿ ನಾರಾಯಣಪ್ಪ ಪ್ರಶಸ್ತಿ, ಅತ್ಯುತ್ತಮ ಕೃಷಿ ವರದಿ). ಶುಭಾ ವಿಕಾಸ್, ವಿಜಯಕರ್ನಾಟಕ (ನಾಡಿಗೇರ ಕೃಷ್ಣರಾಯ ಪ್ರಶಸ್ತಿ, ಹಾಸ್ಯ ಲೇಖನ), ನವೀನ್ ಕುಮಾರ್, ವಿಜಯವಾಣಿ( ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿ).

ವಿದ್ಯುನ್ಮಾನ ವಿಭಾಗ: ಅತ್ಯುತ್ತಮ ರಾಜಕೀಯ ವಿಶ್ಲೇಷಣೆಗೆ ಟಿ.ವಿ.9. ಅತ್ಯುತ್ತಮ ಸಾಮಾಜಿಕ ಕಳಕಳಿ, ಮಾನವೀಯ ವರದಿಗೆ ಸುವರ್ಣ ನ್ಯೂಸ್ ಬೆಂಗಳೂರು. ಅತ್ಯುತ್ತಮ ತನಿಖಾ ವರದಿ– ಚಿದಾನಂದ ಪಟೇಲ್, ನ್ಯೂಸ್–18, ಕನ್ನಡ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು