ಮಂಗಳವಾರ, ಮೇ 18, 2021
28 °C

ಕಾರವಾರ, ಮಂಗಳೂರಿನಲ್ಲಿ ಮುಂದುವರಿದ ಮಳೆ, ಮೈದುಂಬಿದ ನದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ, ಮಂಗಳೂರು: ಕಾರವಾರ ಮತ್ತು ಮಂಗಳೂರಿನಲ್ಲಿ ಗುರುವಾರ ರಾತ್ರಿ ಮಳೆಯಾಗಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕಾರವಾರದಲ್ಲಿ ಇನ್ನೆರೆಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕಾರವಾರದಲ್ಲಿ ಬಿರುಸಿನ ಮಳೆ ಆರಂಭವಾಗಿದೆ. ಗುರುವಾರ ತಡರಾತ್ರಿಯಿಂದ ಮಳೆ ಬಿಟ್ಟೂ ಬಿಟ್ಟು ಸುರಿಯುತ್ತಿತ್ತು. ಶುಕ್ರವಾರ ಬೆಳಿಗ್ಗೆ ದಟ್ಟವಾದ ಮೋಡ ಕವಿದಿದ್ದು, ಮಳೆ ಮುಂದುವರಿಯುವ ಲಕ್ಷಣಗಳಿವೆ. ಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳೂರು ಉಡುಪಿಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿ, ಹೊಳೆಗಳು ತುಂಬಿ ಹರಿಯುತ್ತಿವೆ. ಶಾಲೆಗಳಿಗೆ ರಜೆ ಕೊಟ್ಟಿಲ್ಲ.


ಕಾರವಾರದ ಕೋಡಿಬಾಗ ರಸ್ತೆಯಲ್ಲಿ ಶುಕ್ರವಾರ ವಾಹನಗಳು ಹೆಡ್ ಲೈಟ್ ಬೆಳಗಿಸಿಕೊಂಡು ಸಾಗಿದವು

ಕೊಡಗಿನಲ್ಲಿ ತಗ್ಗಿದ ಮಳೆ ಅಬ್ಬರ
ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಗುರುವಾರ ರಾತ್ರಿಯಿಂದಲೇ ಮಳೆ ಕಡಿಮೆಯಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದ್ದು ನದಿಗಳಲ್ಲಿ ನೀರಿನಮಟ್ಟ ಇಳಿಕೆಯಾಗಿದೆ‌. ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಶಾಲೆಗಳು ಎಂದಿನಂತೆಯೇ ಆರಂಭಗೊಂಡಿವೆ. ಗುರುವಾರ ಈ ಎರಡು ತಾಲ್ಲೂಕು ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಜಲಾಶಯಗಳ ಇಂದಿನ(ಜೂನ್‌ 29) ನೀರಿನಮಟ್ಟ
ಹೇಮಾವತಿ ಜಲಾಶಯ
ಗರಿಷ್ಠ. ಮಟ್ಟ: 2922 (ಅಡಿ) 
ಇಂದಿನ ಮಟ್ಟ: 2905.60 ಅಡಿ
ಒಳಹರಿವು: 14551 ಕ್ಯುಸೆಕ್
ಹೊರಹರಿವು: 900 ಕ್ಯುಸೆಕ್

ಹಾರಂಗಿ ಜಲಾಶಯ- ಕೊಡಗು
ಗರಿಷ್ಠ ಮಟ್ಟ: 2,859 ಅಡಿ
ಇಂದಿನ ಮಟ್ಟ: 2,845.50 ಅಡಿ
ಒಳ ಹರಿವು: 5,485 ಕ್ಯುಸೆಕ್ 
ಹೊರ ಹರಿವು: 30 ಕ್ಯುಸೆಕ್

ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 106.25 ಅಡಿ
ಒಳಹರಿವು: 10,168 ಕ್ಯುಸೆಕ್
ಹೊರಹರಿವು: 3,482 ಕ್ಯುಸೆಕ್
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು